ನಿವೃತ್ತ ಮುಖ್ಯ ಶಿಕ್ಷಕ ಆನಂದ ಕೆ.ಅಸೈಗೋಳಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ರವೀಂದ್ರ ರೈ ಹರೇಕಳ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಉಪಸ್ಥಿತರಿದ್ದರು.
ಉಳ್ಳಾಲ: ನಿವೃತ್ತಿ ಬಳಿಕ ಸುಮ್ಮನೆ ಕೂರದೆ ಸದಾ ಧಾರ್ಮಿಕ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆನಂದ ಮಾಸ್ಟರ್ ಬಗ್ಗೆ ಇತರರು ಕಲಿಯುವಂಥದ್ದು ಸಾಕಷ್ಟಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು ಅಭಿಪ್ರಾಯಪಟ್ಟರು.
ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಬುಧವಾರ ನಿವೃತ್ತ ಮುಖ್ಯಶಿಕ್ಷಕ ಆನಂದ ಕೆ.ಅಸೈಗೋಳಿ ಅವರಿಗೆ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ, ಮಕ್ಕಳಿಗೆ ಮಾತ್ರ ಕಲಿಸದೆ, ಇಡೀ ಸಮಾಜಕ್ಕೆ ಕಲಿಸುವವರು ಗುರು ಆಗಿರುತ್ತಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ಮುನ್ನೂರು ಯುವಕ ಮಂಡಲ ಅಧ್ಯಕ್ಷ ಹರೀಶ್ ಮುಂಡೋಳಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ವಿಜೇತ್ ಪಜೀರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಯುವಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷ ನಾಗವೇಣಿ ಶೆಟ್ಟಿ, ಪ್ರತಿಷ್ಠಾನ ಗೌರವಾಧ್ಯಕ್ಷ ರಾಕೇಶ್ ಬೈಪಾಸ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಗುರುವಂದನಾ ಸಂಚಾಲಕ ಮೋಹನ್ ಸಾಲ್ಯಾನ್ ಸನ್ಮಾನಪತ್ರ ವಾಚಿಸಿದರು. ದೀಕ್ಷಿತ್ ನಿಸರ್ಗ ವಂದಿಸಿದರು. ಕೃಷ್ಣ ಪೊನ್ನೆತ್ತೋಡು ಕಾರ್ಯಕ್ರಮ ನಿರೂಪಿಸಿದರು.
ಪ್ರಾಯ ಹೆಚ್ಚಾಯಿತೆನ್ನುವ ಭಾವನೆ ಮನದಲ್ಲಿ ಬಂದರೆ ಸಮಾಜದಲ್ಲಿ ಸಕ್ರಿಯವಾಗಿರಲು ಅಸಾಧ್ಯ. 60 ವರ್ಷ ದಾಟಿದರೆ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬೇಕು. ಮನೆಯಿಂದ ಹೊರಬಂದಾಗ ಮಾತ್ರ ಕಾಯಿಲೆಮುಕ್ತ ಜೀವನ ಸಾಧ್ಯ.