ಕುಂದಾಪುರ ಬಂಟರ ಭವನದ ಸಭಾಭವನದಲ್ಲಿ ರೈತ ಸಂದ ಪದಾಧಿಕಾರಿಗಳ ಹಾಗೂ ರೈತ ಮುಖಂಡರ ಸಭೆ ನಡೆಯಿತು. ಪ್ರತಾಪಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ, ಬೆಳ್ವೆ ಸತೀಶ ಕಿಣಿ, ಭುಜಂಗ ಶೆಟ್ಟಿ ಮೊದಲಾದವರು ಇದ್ದರು
ಕುಂದಾಪುರ: ರೈತರಿಗಾಗಿ ದೊರೆತ 110 ಎಕರೆ ಭೂಮಿ ಮರಳಿ ಸರ್ಕಾರಕ್ಕೆ ಹೋಗದಂತೆ ಕಾಪಾಡಬೇಕು. ಕಬ್ಬು ಬೆಳೆಯದೆ ಸಕ್ಕರೆ ಕಾ ರ್ಖಾನೆ ಉಳಿಸಲಾಗದು. ಕಬ್ಬು ಬೆಳೆದವರಿಗೆ ತೊಂದರೆಯಾಗದಂತೆ ಬೆಲ್ಲ ತಯಾರಿಸಲಾಗುತ್ತಿದೆ. ಆದರೆ ಕಾರ್ಖಾನೆ ಉಳಿವಿಗೆ ಕನಿಷ್ಠ 1 ಸಾವಿರ ಎಕರೆ ಕಬ್ಬು ಬೆಳೆಯಬೇಕು ಎಂದು ರೈತ ಸಂ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಕುಂದಾಪುರ ಬಂಟರ ಭವನದ ಸಭಾಭವನದಲ್ಲಿ ಸೋಮವಾರ ನಡೆದ ರೈತ ಸಂದ ಪದಾಧಿಕಾರಿಗಳ ಹಾಗೂ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು. ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ದಿವಾಕರ ಶೆಟ್ಟಿ, ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೆಳ್ವೆ ಸತೀಶ ಕಿಣಿ, ಸಕ್ಕರೆ ಕಾರ್ಖಾನೆ ನಿರ್ದೇಶಕ ಭುಜಂಗ ಶೆಟ್ಟಿ ಮಾತನಾಡಿದರು.
ಕಾರ್ಖಾನೆ ಉಪಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ನಿರ್ದೇಶಕರಾದ ಭೋಜ ಕುಲಾಲ್, ಮಲ್ಯಾಡಿ ಶಿವರಾಮ ಶೆಟ್ಟಿ, ಕಾಂಗ್ರೆಸ್ ಮುಖಂಡ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ, ಸಹಕಾರಿ ಸಂಗಳ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಪ್ರದೀಪ್ ಬಳ್ಳಾಲ್ ಶಿರಿಯಾರ, ರೈತ ಸಂದ ಪದಾಧಿಕಾರಿಗಳಾದ ಕೃಷ್ಣದೇವ ಕಾರಂತ ಕೋಣಿ, ಚಂದ್ರಶೇಖರ ಶೆಟ್ಟಿ ಮೊಳಹಳ್ಳಿ, ಸೀತಾರಾಮ ಶೆಟ್ಟಿ ಕೆ., ಶರತ್ ಕುವಾರ್ ಶೆಟ್ಟಿ ಬಾಳಿಕೆರೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಉದಯ ಕುವಾರ್ ಶೆಟ್ಟಿ ವಂಡ್ಸೆ, ಕಿರಣ್ ಹೆಗ್ಡೆ ಅಂಪಾರು, ಗುಲ್ವಾಡಿ ಶರತ್ ಶೆಟ್ಟಿ, ಚೋರಾಡಿ ಅಶೋಕ್ ಶೆಟ್ಟಿ ಮೊದಲಾದವರು ಇದ್ದರು.