ಬೆಳ್ವೆ ವಾಸುಕಿ ಸಭಾಭವನದಲ್ಲಿ ನಡೆದ ಚಿತ್ರ ಬಿಡಿಸುವ ಸ್ಫರ್ಧೆಯನ್ನು ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 5ರ ಪ್ರಾಂತ್ಯಾಧ್ಯಕ್ಷ ರಜತ್‌ಕುಮಾರ್ ಹೆಗ್ಡೆ ಉದ್ಘಾಟಿಸಿದರು. 
ಉಡುಪಿ

ಒಗ್ಗಟ್ಟಿನ ಸೇವಾ ಮನೋಭಾವನೆ ಬೆಳವಣಿಗೆಗೆ ಪೂರಕ

ಬೆಳ್ವೆ: ಸಾಮಾಜಿಕ ಸೇವಾ ಕಾರ್ಯಕ್ರಮಗಳೊಂದಿಗೆ ಮೂಂಚೂಣಿಯಲ್ಲಿರುವ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಶ್ರೇಷ್ಠ ಸಾಧನೆ ಪ್ರಶಂಸನೀಯ. ಕ್ಲಬ್‌ನಲ್ಲಿ ಎಲ್ಲರ ಒಗ್ಗಟ್ಟಿನ ಸೇವಾ ಮನೋಭಾವನೆ ಉತ್ತಮ ಬೆಳವಣಿಗೆಗೆ ಪೂರಕವಾಗಿದೆ ಎಂದು ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 5ರ ಪ್ರಾಂತ್ಯಾಧ್ಯಕ್ಷ ರಜತ್ ಕುಮಾರ್ ಹೆಗ್ಡೆ ಹೇಳಿದರು.
ಬೆಳ್ವೆ ವಾಸುಕಿ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಹಬ್ಬ-2025ರ ಅಂಗವಾಗಿ ಕ್ಲಬ್ ವ್ಯಾಪ್ತಿಯ ಆಯ್ದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡ ಚಿತ್ರ ಬಿಡಿಸುವ ಸ್ಫರ್ಧೆ ಉದ್ಘಾಟಿಸಿ ಮಾತನಾಡಿದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 5ರ ಕಾರ್ಯದರ್ಶಿ ಏಕದಂತ ಬೋಳಾರ್, ವಲಯಾಧ್ಯಕ್ಷೆ ರಮಾ ಇ.ಬೋಳಾರ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ ಸಂಜೀವ ಆರ್ಡಿ, ಕೋಶಾಧಿಕಾರಿ ಬಾಲಮುರಳಿಕೃಷ್ಣ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಅಣ್ಣಯ್ಯ ಶೆಟ್ಟಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಕೆ ಸಂಜೀವ ಆರ್ಡಿ ವಂದಿಸಿದರು. ಕೀರ್ತಿಕುವಾರ್ ಶೆಟ್ಟಿ ನಿರೂಪಿಸಿದರು.