ಆಟೋರಿಕ್ಷಾದಲ್ಲಿದ್ದ ಹಾವನ್ನು ಉರಗ ಸಂರಕ್ಷಕ ಉಬೈದ್ ರಕ್ಷಿಸಿ ಕಾಡಿಗೆ ಬಿಟ್ಟರು.
ಕುಂಬಳೆ: ಚೇವಾರ್‌ನಲ್ಲಿ ಬುಧವಾರ ಸಂಚರಿಸುತ್ತಿದ್ದ ಆಟೋರಿಕ್ಷಾದೊಳಗೆ ಬಂದ ಹಾವೊಂದು ಚಾಲಕನ ಮೇಲಿರದ್ದು ಕೂಡಲೇ ಚಾಲಕ ರಿಕ್ಷಾ ನಿಲ್ಲಿಸಿ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಪೈವಳಿಕೆ ಚೇವಾರಿನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುವ ಪಿಯೂಸ್ ಡಿಸೋಜ ಬುಧವಾರ ಬೆಳಗ್ಗೆ ಇಬ್ಬರು ಪ್ರಯಾಣಿಕರನ್ನು ಸುಬ್ಬಯ್ಯಕಟ್ಟೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪಿಯೂಸ್ ಡಿಸೋಜ ಅವರ ಕೈಗೆ ಏನೋ ಹತ್ತಿದ ಅನುಭವವಾಗಿದೆ. ನೋಡಿದಾಗ ಹಾವೊಂದು ಅವರ ಕೈಯನ್ನು ಸುತ್ತುವರಿದಿದ್ದು ಕೂಡಲೇ ಚಾಲಕ ಕೈಕೊಡವಿ ಹಾವನ್ನು ಕೆಳಗೆ ಹಾಕಿದ್ದಾರೆ. ಬಳಿಕ ಚಾಲಕ ಹಾಗೂ ಪ್ರಯಾಣಿಕರು ಕೆಳಗಿಳಿದಿದ್ದು, ಹಾವು ರಿಕ್ಷಾದ ಹ್ಯಾಂಡಲ್ ಬಳಿಯ ಸಂಧಿಯೊಳಗೆ ಹೋಗಿತ್ತು.
ಬಳಿಕ ಉರಗ ರಕ್ಷಕ ಚೇವಾರ್‌ನ ಉಬೈದ್ ಆಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಹಾವು ಅಲ್ಪ ಪ್ರಮಾಣದ ವಿಷ ಹೊಂದಿದೆ ಎಂದು ಉಬೈದ್ ತಿಳಿಸಿದ್ದಾರೆ.