ಉಡುಪಿಯಲ್ಲಿ ಅತ್ಯಾಧುನಿಕ ಸೌಕರ್ಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ "ಸಾಯಿರಾಧಾ ನಿತ್ಯಧಾಮ' ಫೇಸ್​-2. ವಸತಿ ಸಮುಚ್ಚಯ. 
ಉಡುಪಿ

ಕನಸಿನ ಸೂರಿಗೆ 'ಸಾಯಿರಾಧಾ ನಿತ್ಯಧಾಮ' ಸಜ್ಜು

* ಗ್ರಾಹಕರಿಗೆ ಭರ್ಜರಿ ಫೆಸ್ಟಿವಲ್​ ಆಫರ್​

* 2, 3 ಬಿಎಚ್​ಕೆ ವಸತಿ ಸಮುಚ್ಚಯ 

ಉಡುಪಿ: ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ 'ಸಾಯಿರಾಧಾ ಡೆವಲಪರ್ಸ್​'ನ 24ನೇ ಯೋಜನೆಯಾಗಿ ಉಡುಪಿ ನಗರದ ಹೃದಯ ಭಾಗವಾದ ವಿದ್ಯೋದಯ ಪಬ್ಲಿಕ್​ ಸ್ಕೂಲ್​ ಎದುರಿನಲ್ಲಿ 'ಸಾಯಿರಾಧಾ ನಿತ್ಯಧಾಮ ಫೇಸ್​-2' ವಸತಿ ಸಮುಚ್ಚಯ ನಿರ್ಮಾಣಗೊಳ್ಳುತ್ತಿದೆ.
ಈ ಯೋಜನೆಯು ಜನಸಾಮಾನ್ಯರ ಮನೆಯ ಅಗತ್ಯ ಪೂರೈಸುವ ಮಹತ್ವದ ಹೆಜ್ಜೆಯಾಗಿದ್ದು, ಗುಣಮಟ್ಟದ ನಿರ್ಮಾಣದ ಮೂಲಕ ಜನರ ಕನಸಿನ ಮನೆಯ ಆಶಯ ಸಾಕಾರಗೊಳಿಸಲಿದೆ. ಈ  ಸಮುಚ್ಚಯವು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಬಳಕೆಗೆ ಲಭ್ಯವಾಗಲಿದೆ.

ಅತ್ಯಾಧುನಿಕ ಸೌಕರ್ಯ

2 ಮತ್ತು 3 ಬಿಎಚ್​ಕೆಯ 1,235ರಿಂದ 1,904 ಚ.ಅಡಿ ವಿಸ್ತೀರ್ಣದ ವಿಶಾಲವಾದ 42 ಫ್ಲಾಟ್​ಗಳನ್ನು 'ನಿತ್ಯಧಾಮ' ಒಳಗೊಂಡಿದೆ. ವಸತಿ ಸಮುಚ್ಚಯವು ಅತ್ಯಾಧುನಿಕ ಸೌಕರ್ಯದೊಂದಿಗೆ ಗ್ರಾಹಕರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುವಂತೆ ನಿರ್ಮಾಣಗೊಳ್ಳುತ್ತಿದೆ. 
ಶಾಲಾ-ಕಾಲೇಜ್​, ಶ್ರೀಕೃಷ್ಣ ಮಠ, ಶಾಪಿಂಗ್​ ಮಾಲ್​, ರೈಲ್ವೆ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿ ಉತ್ಕಷ್ಟ ಗುಣಮಟ್ಟದ ನೂತನ ವಸತಿ ಸಮುಚ್ಚಯ ಇದಾಗಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಉದ್ದೇಶದೊಂದಿಗೆ ನಿರ್ಮಾಣವಾಗಲಿದೆ.

5 ಲಕ್ಷ ರೂ. ವರೆಗೆ ವಿಶೇಷ ರಿಯಾಯಿತಿ 

ಗ್ರಾಹಕರಿಗೆ ಸ್ವಂತ ಮನೆ ಹೊಂದಬೇಕೆಂಬ ಕನಸು ನನಸಾಗಿಸಲು ಹಾಗೂ ಖರೀದಿ ಮಾಡಲು ಆಸಕ್ತರಾಗಿರುವವರಿಗೆ ಅನುಕೂಲಕ್ಕಾಗಿ ಹಬ್ಬದ ಪ್ರಯುಕ್ತ 5 ಲಕ್ಷ ರೂ. ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಹಾಗೂ ವಸತಿ ಸಮುಚ್ಚಯದ ಬಗ್ಗೆ ಹೆಚ್ಚಿನ ವಿವರಗಳಿಗೆ ವೆಬ್​ಸೈಟ್​ www.sairadhadevelopers.in ಭೇಟಿ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.