ಬಾಂಧವ್ಯ-2026 ಕಾರ್ಯಕ್ರಮದಲ್ಲಿ ಕುಪ್ಪೆಪದವು ಕಲ್ಯಾಣಿ ಸ್ಟುಡಿಯೋದ ಗುಣಪಾಲ ಅವರನ್ನು ಸನ್ಮಾನಿಸಲಾಯಿತು. ದೈಜಿವರ್ಲ್ಡ್ ಸಂಸ್ಥೆ ಮುಖ್ಯಸ್ಥ ವಾಲ್ಟರ್ ನಂದಳಿಕೆ, ನಿತಿನ್ ಬೆಳುವಾಯಿ, ಅಜಯ್ ಮಂಗಳೂರು ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಛಾಯಾಗ್ರಹಣ ಕೇವಲ ಚಿತ್ರ ಸೆರೆಹಿಡಿಯುವ ಕಲೆಯಲ್ಲ. ಸಮಾಜಕ್ಕೆ ನೈಜ ಸಂದೇಶ ಸಾರುವ ಮಹತ್ತರ ಜವಾಬ್ದಾರಿ ಎಂದು ದೈಜಿವರ್ಲ್ಡ್ ಸಂಸ್ಥೆ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹೇಳಿದರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮೂಡುಬಿದಿರೆ ವಲಯ ವತಿಯಿಂದ ಬುಧವಾರ ಬಾಂಧವ್ಯ 2026-ಛಾಯಾ ಕುಟುಂಬದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಲಯದ ಸದಸ್ಯರು, ಕುಟುಂಬದವರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಟುಂಬಗಳ ನಡುವೆ ಸೌಹಾರ್ದ, ಆತ್ಮೀಯತೆ ಬೆಳೆಸುವುದರ ಜತೆಗೆ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಯಿತು. ಕುಪ್ಪೆಪದವು ಕಲ್ಯಾಣಿ ಸ್ಟುಡಿಯೋದ ಗುಣಪಾಲ ಅವರನ್ನು ಸನ್ಮಾನಿಸಲಾಯಿತು. ವಲಯ ಅಧ್ಯಕ್ಷ ನಿತಿನ್ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಅಜಯ್ ಮಂಗಳೂರು, ದೇವರಾಜ್ ಶೆಟ್ಟಿ, ರವಿ ಕೋಟ್ಯಾನ್, ವಿಲ್ಫ್ರೆಡ್ ಮೆಂಡೋನ್ಸಾ, ಉದಯಕುಮಾರ್ ಎಂ., ಪದ್ಮನಾಭ ಮಿಜಾರು, ನಮಿತ್ ಬಂಗೇರ, ರಂಜಿತ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂದೀಪ್ ಶೆಟ್ಟಿ ರಾಯಿ ನಿರೂಪಿಸಿದರು. ವಿಲ್ಫ್ರೆಡ್ ಮೆಂಡೋನ್ಸ ಸ್ವಾಗತಿಸಿದರು. ನಮಿತ್ ಬಂಗೇರ ವಂದಿಸಿದರು. ಸನ್ಮಾನ, ವಿದ್ಯಾರ್ಥಿವೇತನ, ಚಿಕಿತ್ಸೆಗೆ ನೆರವು ನೀಡುವ ಚಟುವಟಿಕೆಗಳು ನಡೆದವು.