ಕುಂದಾಪುರದಲ್ಲಿ ಆಷಾಢ ಸಂಭ್ರಮ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಸತೀಶ್ ಗಾಣಿಗ, ಡಾ.ಸೌಮ್ಯಾ ರಾವ್, ಎಚ್.ಎಸ್.ಗಾಣಿಗ ಮೊದಲಾದವರಿದ್ದರು. 
ಉಡುಪಿ

ಯುವ ಪೀಳಿಗೆಗೆ ಅರ್ಥವಾಗುವಂತೆ ಕಾರ್ಯಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ಪ್ರತಿ ಕಾರ್ಯಕ್ರಮದ ಹಿಂದೆಯೂ ಸದುದ್ದೇಶವಿರುತ್ತದೆ. ಆ ಸದುದ್ದೇಶ ನಮಗೆ ವಾತ್ರವಲ್ಲ, ಮುಂದಿನ ಪೀಳಿಗೆಗೂ ಅರ್ಥವಾಗುವಂತೆ ನಾವು ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಸಂಘಟಿಸಿದಾಗ ಎಷ್ಟೋ ಕೌತುಕದ ವಿಚಾರಗಳು ಯುವ ಪೀಳಿಗೆಗೂ ಅರ್ಥವಾಗುತ್ತದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಸತೀಶ್ ಗಾಣಿಗ ಹೇಳಿದರು.

ಕುಂದಾಪುರ ತಾಲೂಕು ಗಾಣಿಗ ಮಹಿಳಾ ಸಂಘಟನೆ ವತಿಯಿಂದ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಆಷಾಢ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿರು.
ಆಯುರ್ವೇದ ವೈದ್ಯೆ ಡಾ.ಸೌಮ್ಯಾ ರಾವ್ ಉದ್ಘಾಟಿಸಿದರು. ಸಂಘದ ಕೋಶಾಧಿಕಾರಿ ಎಚ್.ಎಸ್.ಗಾಣಿಗ, ತಾಲೂಕು ಗಾಣಿಗ ಮಹಿಳಾ ಸಂಘಟನೆ ಅಧ್ಯಕ್ಷೆ ಸುಜಾತಾ ಗಾಣಿಗ, ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಸವಿತಾ ಗಾಣಿಗ, ಬಸ್ರೂರು ಘಟಕದ ನಯನಾ ಗಾಣಿಗ, ಕುಂದಾಪುರ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಮಮತಾ ಶಿವಾನಂದ ಗಾಣಿಗ, ಕೋಶಾಧಿಕಾರಿ ರಾಧಿಕಾ ಉಪಸ್ಥಿತರಿದ್ದರು. ಶ್ವೇತಾ ಗಣೇಶ್ ನಿರೂಪಿಸಿದರು. ಕಲಾವತಿ ಅಚ್ಯುತ್ ಗಾಣಿಗ ಪ್ರಸ್ತಾವನೆಗೈದರು.