ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರವನ್ನು ಅವನಿ ಹೊಳ್ಳ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಮುಖರಾದ ರವೀಂದ್ರ ಕೋಟ, ವೆಂಕಟೇಶ ಉಡುಪ, ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇದ್ದರು.  
ಉಡುಪಿ

ಸಾಹಿತ್ಯದ ಅಭಿರುಚಿ ಬೆಳೆಸುವ ವೇದಿಕೆ

ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ

ಕೋಟ: ಮಕ್ಕಳ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಕಾರ್ಯ ಶ್ಲಾಘನೀಯ. ಆಧುನಿಕ ಕಾಲಘಟ್ಟದಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ಹಲವು ರೀತಿಯ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿ ಪರಿಸರದಲ್ಲಿ ಸಾಹಿತ್ಯಿಕ ಕಂಪು ಪಸರಿಸಲಾಗುತ್ತಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.

ಗುಂಡ್ಮಿಯಲ್ಲಿ ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ, ಸಾಹಿತ್ಯ ಸಂಘ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಆಶ್ರಯದಲ್ಲಿ ‘ವರ್ಷ ಸಂಭ್ರಮ’ ಕೃತಿ ಬಿಡುಗಡೆ ಮತ್ತು ಅಂಬಲಪಾಡಿ ಡಾ.ನಿ.ವಿಜಯ ಬಲ್ಲಾಳರು ತಮ್ಮ ತಂದೆಯ ನೆನಪಿನಲ್ಲಿ ಸಾಹಿತ್ಯ ಕೃಷಿಗಾಗಿ ಕೊಡಮಾಡುತ್ತಿರುವ 17ನೇ ವರ್ಷದ ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ ಕಾರ್ಯಕ್ರಮದಲ್ಲಿ ಶನಿವಾರ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.

ಅವನಿ ಹೊಳ್ಳ ಅವರಿಗೆ ಅಣ್ಣಾಜೀ ಬಲ್ಲಾಳ ಬಾಲ ಪುರಸ್ಕಾರ ನೀಡಿ ಗೌರವಿಸಲಾಯಿತು. ಸತ್ಯನಾರಾಯಣ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ಅವನಿ ಹೊಳ್ಳ ರಚಿಸಿದ ಕವನ ಸಂಕಲ ಮನದ ಮಾತು ಕೃತಿಯನ್ನು ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಬಿಡುಗಡೆಗೊಳಿಸಿದರು.

ವಿವೇಕ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿ ಅನಘ ಹೊಳ್ಳ ವರ್ಷ ಅಧ್ಯಕ್ಷತೆ ವಹಿಸಿದ್ದರು. ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅಣ್ಣಾಜಿ ಬಲ್ಲಾಳ್ ಪುರಸ್ಕಾರ ಸಭೆಯನ್ನು ನಿರ್ವಹಿಸಿದರು. ಕೋಟ ವಿವೇಕ ಬಾಲಕಿಯರ ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರೇಮಾನಂದ, ಅವನಿ ಹೊಳ್ಳ ಪಾಲಕರಾದ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು. ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಸೃಷ್ಟಿ ಆರ್. ಕಾರ್ಯಕ್ರಮ ನಿರೂಪಿಸಿದರು. ನಿಲಾವರ ಸುರೇಂದ್ರ ಅಡಿಗ ವಂದಿಸಿದರು.