ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವರ ದರ್ಶನ ಪಡೆದರು. 
ಉಡುಪಿ

ಮಾನಸಿಕ, ಆಧ್ಯಾತ್ಮಿಕವಾಗಿ ಬಲಪಡಿಸುವ ತಾಣ

ಕಾಸರಗೋಡು: ದೇವಾಲಯಗಳು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ತುಂಬುವ ಪವಿತ್ರ ಕ್ಷೇತ್ರಗಳಾಗಿದ್ದು, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಬಲಪಡಿಸುವ ತಾಣಗಳಾಗಿವೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಪಾದರ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಶ್ರೀಪಾದರು ಹೇಳಿದರು.
ಬ್ರಹ್ಮಕಲಶೋತ್ಸವ ನೆರವೇರಿದ ಪೆರ್ಲ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಶ್ರೀ ದೇವರ ದರ್ಶನ ಪಡೆದು ಫಲ ಪುಷ್ಪ, ಸ್ಮರಣಿಕೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಶಿಕ್ಷಣ ತಜ್ಞ, ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಸ್ವಾಮೀಜಿಗಳನ್ನು ಗೌರವಿಸಿ ಮಾತನಾಡಿ, ನಾವೆಲ್ಲ ಶಂಕರಾಚಾರ್ಯ ಪರಂಪರೆಯ ಭಕ್ತರು. 1,200 ವರ್ಷಕ್ಕೂ ಹೆಚ್ಚಿನ ಇತಿಹಾಸದ ಶೃಂಗೇರಿ ಪೀಠವು ಅದ್ವೈತ ವೇದಾಂತ ತತ್ವ ಸಂರಕ್ಷಿಸುವ ಮತ್ತು ಪ್ರಚಾರ ಮಾಡುವ ಪ್ರಮುಖ ಕೇಂದ್ರ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಡಾ.ಸತೀಶ್ ಪುಣಿಂಚಿತ್ತಾಯ ಸ್ವಾಗತಿಸಿದರು. ಸುರೇಶ್ ನೆಲ್ಲಿಕುಂಜೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಧೂಳೀಪಾದ ಪೂಜೆ, ಪ್ರಥಮ ವೇದ ಘೋಷ ಕಾರ್ಯಕ್ರಮದೊಂದಿಗೆ ಮಂತ್ರಾಕ್ಷತೆ ಬಳಿಕ ಕ್ಷೇತ್ರದ ವತಿಯಿಂದ ಸ್ವಾಮೀಜಿಗಳನ್ನು ಬೀಳ್ಕೊಡಲಾಯಿತು.