ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯ ಮುನಿರಾಜ ಹೆಗ್ಡೆ, ಒಕ್ಕೂಟ ಅಧ್ಯಕ್ಷೆ ಶೋಭಾ, ವಸಂತಿ ಮತ್ತಿತರರಿದ್ದರು.  
ಉಡುಪಿ

ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಅತ್ಯಗತ್ಯ

ಮೂಡುಬಿದಿರೆ: ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಹೇರಳ ಪ್ರಮಾಣದ ಪೌಷ್ಟಿಕಾಂಶ ಲಭ್ಯವಿರುವುದರಿಂದ ಇಂತಹ ಆಹಾರಗಳನ್ನು ದೈನಂದಿನ ಜೀವನದಲ್ಲಿ ಹೆಚ್ಚಾಗಿ ಬಳಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಅಗತ್ಯ ಎಂದು ಜನಜಾಗೃತಿ ವೇದಿಕೆ ಸದಸ್ಯ ಮುನಿರಾಜ ಹೆಗ್ಡೆ ಹೇಳಿದರು.

ಪಣಪಿಲ ಕಾರ್ಯಕ್ಷೇತ್ರದ ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಭಾನುವಾರ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕಿ ಪುಷ್ಪಾ ಪ್ರಸ್ತಾವನೆಗೈದರು. ಹಿರಿಯರಾದ ವಸಂತಿ ದಾಳಿಂಬೆ ಸಲಾಡ್ ತಯಾರಿಸುವ ವಿಧಾನ, ಅದರ ಪೌಷ್ಟಿಕಾಂಶದ ಉಪಯೋಗಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಜ್ಞಾನವಿಕಾಸ ಕೇಂದ್ರ ಸದಸ್ಯರು ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸಿ ಪ್ರದರ್ಶಿಸಿದರು.
ಉತ್ತಮ ಆಹಾರ ತಯಾರಿಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಪಣಪಿಲ ಬಿ. ಒಕ್ಕೂಟ ಅಧ್ಯಕ್ಷ ಸುಕೇಶ್, ಮಾಜಿ ಅಧ್ಯಕ್ಷ ಜಯ, ಸೇವಾಪ್ರತಿನಿಧಿ ಲತಾ, ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನುತಾ ನಿರೂಪಿಸಿದರು.