ಉಡುಪಿ

ಗಳಿಕೆಯಲ್ಲಿ ಕಿಂಚಿತ್​ ದಾನದಿಂದ ಜೀವನ ಸಾರ್ಥಕ್ಯ

* ಧರ್ಮದರ್ಶಿ ಹರಿಕೃಷ್ಣ ಪುನರೂರು ಅನಿಸಿಕೆ

* ಯಕ್ಷಗಾನ ಕಲಾರಂಗದ 107ನೇ ಮನೆಯ ಹಸ್ತಾಂತರ

ಉಡುಪಿ: ಗಂಗಾಧರ ರಾಯರು ಪರಿಶ್ರಮದಿಂದ ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೆ ನಿರಂತರ ನೀಡುತ್ತಿರುವ ರೀತಿ ಕಂಡಾಗ ಅಚ್ಚರಿ, ಆನಂದವೂ ಆಗುತ್ತಿದೆ. ಗಳಿಸಿದ ಹಣದಲ್ಲಿ ಕಿಂಚಿತ್​ ದಾನ ಮಾಡುವುದರಲ್ಲಿ ಸಂತೋಷ, ಸಾರ್ಥಕ್ಯವಿರುತ್ತದೆ. ಅದನ್ನು ನಾನೂ ಅನುಭವಿಸಿದ್ದೇನೆ. ಈ ಧರ್ಮ ಕಾರ್ಯದ ಹಿಂದೆ ಅವರ ಪತ್ನಿಯ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್​ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಉಡುಪಿ ಯಕ್ಷಗಾನ ಕಲಾರಂಗವು ಮೂಡು ಅಲೆವೂರಿನ ಉಮೇಶ ಪೂಜಾರಿ ಹಾಗೂ ವಸಂತಿ ದಂಪತಿಯ ಮಕ್ಕಳಾದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ವಿನಿಷಾ ಮತ್ತು ಇಂಜಿನಿಯರ್​ ವಿದ್ಯಾರ್ಥಿ ವಿಘ್ನೇಶ ಅವರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಹಾಗೂ ನಂದಕುಮಾರ ಅಸೋಸಿಯೇಟ್ಸ್​ನ ಮುಖ್ಯಸ್ಥ ಎಂ. ಗಂಗಾಧರ ರಾವ್​ ಅವರು ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ಮಿಸಿಕೊಟ್ಟ 107ನೇ ಮನೆ ಕುಸುಮಾ ನಿವಾಸವನ್ನು ಬುಧವಾರ (ನ.5) ಉದ್ಘಾಟಿಸಿ ಮಾತನಾಡಿದರು.

ಸರಿಸಾಟಿಯಿಲ್ಲದ ನಾಯಕತ್ವ

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್​ನ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ನಾನು ಸೆಲ್ಕೋ ಸೋಲಾರ್​ ಸಂಸ್ಥೆಯಲ್ಲಿದ್ದಾಗ ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲಿಯೂ ಸಹ ನಿಸ್ಪ್ರಹವಾಗಿ ಸಮಾಜಕ್ಕೆ ಅರ್ಪಿಸಿಕೊಂಡ ಇಂತಹ ಸಂಸ್ಥೆಯನ್ನು ಕಂಡಿಲ್ಲ. ಅವರ ನಾಯಕತ್ವ ಮತ್ತು ಕಾರ್ಯಕರ್ತರ ಪಡೆ ಅಸಾಧ್ಯವಾದುದನ್ನು ಸಾಧಿಸಿದೆ ಎಂದರು.

ಉಡುಪಿ ಮೋಲ್ಟೋಕೇರ್​ ಪ್ರಾಪರ್ಟೀಸ್​ ಸರ್ವಿಸಸ್​ನ ಸಂಸ್ಥಾಪಕ ಕೃಷ್ಣರಾಜ ತಂತ್ರಿ ಮಾತನಾಡಿದರು. ಉಡುಪಿ ಎಸಿಸಿಇಎ ಗೌರವಾಧ್ಯಕ್ಷ ಎಂ.ನಾಗೇಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯು. ವಿಶ್ವನಾಥ ಶೆಣೈ, ಡಾ. ಹರಿಶ್ಚಂದ್ರ, ಡಾ. ಎಂ.ಆರ್​. ಹೆಗಡೆ, ಇಂಜಿನಿಯರ್​ ಭಗವಾನ್​ ದಾಸ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

ಸರಸ್ವತಿ ಜಿ. ರಾವ್​, ಪಾವನಿ ರಾವ್​, ಗೋಪಿಕೃಷ್ಣ ರಾವ್​, ಹರಿಣಿ ಜಿ. ರಾವ್​,ರಾಮಕೃಷ್ಣ ರಾವ್​, ಕಮಲಾಕ್ಷಿ ಮಲ್ಲಿಕಾ, ಸಂಸ್ಥೆಯ ಸದಸ್ಯರಾದ ವಿಜಯಕುಮಾರ್​ ಮುದ್ರಾಡಿ, ಭುವನಪ್ರಸಾದ ಹೆಗ್ಡೆ, ಸೀತಾರಾಮ ಭಟ್​, ನಟರಾಜ ಉಪಾಧ್ಯ, ನಿರಂಜನ ಭಟ್​, ಎನ್​.ರಾಮ ಭಟ್​, ಪ್ರಭಾಕರ ಭಂಡಿ, ಮರ್ಣೆ ಉಮೇಶ ಭಟ್​, ಆರ್​. ವಸಂತ, ಕೆ. ಅಜಿತಕುಮಾರ, ಡಾ. ಪ್ರತಿಮಾ ಜೆ. ಆಚಾರ್ಯ, ವಾಮನ ಮೇಸ್ತ್ರಿ ಮತ್ತು ಸಹಾಯಕ ಕಾರ್ಮಿಕ ಪಾಲ್ಗೊಂಡಿದ್ದರು.

ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರು ಕಾರ್ಯಕ್ರಮ ನಿರೂಪಿಸಿದರು.

ಗಂಗಾಧರ ರಾವ್​ ಅವರು ನಮ್ಮ ಊರಿನಲ್ಲಿ ಕಷ್ಟದಲ್ಲಿರುವ ಕಾರ್ಮಿಕನ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟು ಆಸರೆಯಾಗಿದ್ದಾರೆ. ಅವರು ತಮ್ಮ ಕಾರ್ಮಿಕರನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.
ಅಲೆವೂರು ಹರೀಶ ಕಿಣಿ. ಸಾಮಾಜಿಕ ಕಾರ್ಯಕರ್ತ.