ಎಡಪದವು ನಲ್ಯ ಸೀತಾಂಬೆಟ್ಟಿ ಎಂಬಲ್ಲಿ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.  
ಉಡುಪಿ

ಎಡಪದವಿನಲ್ಲಿ ಬೋನಿಗೆ ಬಿದ್ದ ಚಿರತೆ

ಇಂದಿರಾ ಎನ್ ಕೆ

ಗುರುಪುರ: ಎಡಪದವು ನಲ್ಯ ಸೀತಾಂಬೆಟ್ಟಿ ಎಂಬಲ್ಲಿ ಸಾಕುನಾಯಿಯನ್ನು ತಿಂದು ಪರಿಸರದಲ್ಲಿ ಭೀತಿ ಹುಟ್ಟಿಸಿದ ಚಿರತೆ ಭಾನುವಾರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಎಪಡದವಿನ ಸೀತಾಂಬೆಟ್ಟು ಮತ್ತು ಇತರ ಪ್ರದೇಶದಲ್ಲಿ ಕೆಲವು ದಿನಗಳಿಂದ ಚಿರತೆ ಕಾಟ ಕಂಡುಬಂದಿದ್ದು, ನಾಯಿ ಮತ್ತು ದನವನ್ನು ತಿನ್ನುತ್ತಿದೆ ಎಂದು ಸ್ಥಳೀಯರು ದೂರಿದ್ದರು. ಶನಿವಾರ ರಾತ್ರಿ ಸೀತಾಂಬೆಟ್ಟಿನ ಲೋಕೇಶ್ ಎಂಬುವರ ಮನೆಯ ನಾಯಿಯನ್ನು ಚಿರತೆ ತಿಂದಿತ್ತು. ಈ ಬಗ್ಗೆ ಅರಣ್ಯ ಇಲಾಖೆಗ ದೂರು ನೀಡಲಾಗಿತ್ತು. ಇಲಾಖೆಯವರು ಹತ್ತಿರದ ಸ್ಥಳವೊಂದರಲ್ಲಿ ಬೋನು ಇಟ್ಟಿದ್ದರು.