ಹೂಳು, ಗಿಡಗಂಟಿಗಳಿಂದ ಆವೃತವಾಗಿ ಬರಡು ಭೂಮಿಯಂತಾಗಿರುವ ಹೊಸಾಡು ಗ್ರಾಮದ ಕಡುಬಿನ ಕೆರೆ.
ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಎರಡು ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗಿದ್ದ ಕುಂದಾಪುರ ಹೊಸಾಡು ಗ್ರಾಮದ ಕಡುಬಿನ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಭಾಗದ ಜನರಲ್ಲಿ ಹೊಸ ಆಶಾಕಿರಣ ಮೂಡಿದೆ.
7.7 ಎಕರೆ ವಿಸ್ತೀರ್ಣದ ಕಡುಬಿನ ಕೆರೆಯಲ್ಲಿ ಹೂಳು ತುಂಬಿ ಬರಡು ಭೂಮಿಯಾಗಿ ವಾರ್ಪಟ್ಟಿದೆ. ಹೀಗಾಗಿ ಕಡುಬಿನ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೊಪ್ಪರಿಗೆ, ಕವ್ಮಾರಕೊಡ್ಲು, ಮೂಗಿನಬೈಲು, ಕೋಟೆಮಕ್ಕಿ, ಮೈರ್‌ಮನೆ ಪ್ರದೇಶದ 400 ಎಕರೆಗೂ ಅಧಿಕ ಕೃಷಿ ಭೂಮಿ ಮತ್ತು ಅಕ್ಕಪಕ್ಕದ 200ಕ್ಕೂ ಅಧಿಕ ಬಾವಿಗಳಿಗೆ ಕಡುಬಿನ ಕೆರೆಯ ನೀರಿನ ಜಲಮೂಲವೇ ಪ್ರಮುಖವಾಗಿದೆ.
ಈ ಕೆರೆ ನೀರನ್ನು ನಂಬಿಕೊಂಡು ರೈತರು ಈ ಹಿಂದೆ ಮೂರು ಬೆಳೆ ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ಈ ಕೆರೆ ಫೆಬ್ರವರಿಯಲ್ಲೇ ಬರಿದಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧೀನಕ್ಕೆ ಒಳಪಟ್ಟ ಕಡುಬಿನ ಕೆರೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಅಭಿವೃದ್ಧಿ ಕಾಣದೆ ಎರಡು ದಶಕಗಳೇ ಕಳೆದಿವೆ ಎಂದು ಹೊಸಾಡು ಗ್ರಾಮದ ಕೃಷಿಕರು ದೂರಿದ್ದಾರೆ.
ವರ್ಷದಿಂದ ವರ್ಷಕ್ಕೆ ಕೆರೆ ಅತಿಕ್ರಮಣ ಹೆಚ್ಚುತ್ತಿದ್ದು, ಕೆರೆ ಜಾಗವನ್ನು ಸರ್ವೇ ವಾಡಿ ಕೆರೆ ಸಂರಕ್ಷಣೆ ವಾಡಬೇಕು. ಕೃಷಿಕರ ಜೀವನಾಡಿಯಾಗಿದ್ದ ಕಡುಬಿನ ಕೆರೆಯನ್ನು ಅಭಿವೃದ್ಧಿಪಡಿಸಿ ಎಂಬ ಕೂಗು ರೈತಾಪಿ ವರ್ಗದಿಂದ ಕೇಳಿಬಂದಿದೆ.
ಶಿಥಿಲಾವಸ್ಥೆಯಲ್ಲಿ ಕೆರೆ ದಂಡೆ
ಕೆರೆ ದಂಡೆ ಮೇಲೆ ಮುಳ್ಳಿನ ಪೊದೆ, ಗಿಡಗಂಟಿ, ಬೃಹತ್ ಮರಗಳು ಬೆಳೆದುಕೊಂಡಿದ್ದು, ಕೆರೆ ದಂಡೆ ಮೇಲೆ ನಡೆದಾಡಲು ಸಾಧ್ಯವಿಲ್ಲ. ದಂಡೆಯ ಎರಡು ಬದಿಯ ಕಲ್ಲುಗಳು ಜಾರಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಕೆರೆ ದಂಡೆಯನ್ನು ಪುನಃ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಡುಬಿನ ಕೆರೆ ಅಭಿವೃದ್ಧಿ ಬಗ್ಗೆ ಹಲವಾರು ವರ್ಷಗಳಿಂದ ಮನವಿ ವಾಡಿಕೊಳ್ಳುತ್ತಿದ್ದು, ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ವಾಡಿದೆ. ಕೆರೆ ಮಣ್ಣನ್ನು ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು. ಸರ್ಕಾರದ ಅನುದಾನ ಸದ್ಬಳಕೆ ವಾಡಿಕೊಂಡು ಕಡುಬಿನ ಕೆರೆಯನ್ನು ಪುನಃಶ್ಚೇತನಗೊಳಿಸಬೇಕು.