ಉಡುಪಿಯ ಕನ್ನರ್ಪಾಡಿಯಲ್ಲಿರುವ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಶಿರೂರು ಪರ್ಯಾಯ ಪೂರ್ವಭಾವಿ ಸಭೆಯಲ್ಲಿ ಕೆ.ಕೃಷ್ಣಮೂರ್ತಿ ಅಚಾರ್ಯ ಮಾತನಾಡಿದರು. ಸುಪ್ರಸಾದ್​ ಶೆಟ್ಟಿ ಬೈಕಾಡಿ, ಎ.ಸಂಜೀವ್​, ರಘುನಾಥ್​ ಕೋಟ್ಯಾನ್​, ನವೀನ್​ ಶೆಟ್ಟಿ, ಜಯಕರ್​ ಶೇರಿಗಾರ್​, ಗುರುರಾಜ್​ ಉಪಾಧ್ಯ, ಎಂ.ರಾಜೇಂದ್ರ, ನಿರುಪಮಾ ಪ್ರಸಾದ್​ ಇತರರಿದ್ದರು. 
ಉಡುಪಿ

ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ ಕ್ಷೇತ್ರದಿಂದ ಮೆರವಣಿಗೆಯಲ್ಲಿ ಹೊರಕಾಣಿಕೆ

* ಕೆ.ಕೃಷ್ಣಮೂರ್ತಿ ಅಚಾರ್ಯ ಮಾಹಿತಿ

* ಶಿರೂರು ಪರ್ಯಾಯದ ಸಮಾಲೋಚನಾ ಸಭೆ

ಉಡುಪಿ: ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಿಂದ 36 ವರ್ಷದಿಂದ ನಿರಂತರವಾಗಿ ಪರ್ಯಾಯದ ಸಂದರ್ಭದಲ್ಲಿ ಅತ್ಯಂತ ವಿಜೃಂಭಣೆಯಿಂದ ಹೊರೆಕಾಣಿಕೆ ಸಮರ್ಪಣೆ ಮಾಡಲಾಗಿದೆ. ಈ ಬಾರಿಯ ಶಿರೂರು ಮಠದ ಪರ್ಯಾಯಕ್ಕೂ ಸಹ ಶ್ರೀಕ್ಷೇತ್ರದಿಂದ ವೈಭವದ ಮೆರವಣಿಗೆ ಮೂಲಕ ಹೊರೆಕಾಣಿಕೆ ಸಮರ್ಪಣೆ ಆಗಲಿದೆ ಎಂದು ಶ್ರೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅಚಾರ್ಯ ತಿಳಿಸಿದರು.
ಉಡುಪಿ ಕನ್ನರ್ಪಾಡಿಯಲ್ಲಿರುವ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಶಿರೂರು ಪರ್ಯಾಯದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ದೇವಸ್ಥಾನದ ಭಕ್ತವೃಂದ ಅಧಿಕ ಸಂಖ್ಯೆಯಲ್ಲಿ ಸೇರಿ ಹೊರೆಕಾಣಿಕೆ ಸಮರ್ಪಿಸಲಿದ್ದಾರೆ ಎಂದರು.

ಪ್ರತಿ ಮನೆಯಿಂದ 14 ತೆಂಗಿನಕಾಯಿ ಸಲ್ಲಿಸಿ

ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಸಂಚಾಲಕ ಸುಪ್ರಸಾದ್​ ಶೆಟ್ಟಿ ಬೈಕಾಡಿ ಮಾತನಾಡಿ, ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ದೇವರಿಗೆ ನೈವೇದ್ಯಕ್ಕಾಗಿ ಪ್ರತಿ ಮನೆಯಿಂದ 14 ತೆಂಗಿನಕಾಯಿ ಸಮರ್ಪಿಸೋಣ. ಅಲ್ಲದೆ, ಪರ್ಯಾಯದ ಅವಧಿಯಲ್ಲಿ ಆಗಮಿಸುವ ಭಕ್ತರಿಗೆ ಪ್ರಸಾದ ಭೋಜನ ನೀಡಲು ಅಗತ್ಯವಿರುವ ಯಥಾನುಶಕ್ತಿ ಅಕ್ಕಿ, ತರಕಾರಿ, ಬೆಲ್ಲ ಸೇರಿದಂತೆ ಇನ್ನಿತರ ಸುವಸ್ತುಗಳನ್ನು ಹೊರೆಕಾಣಿಕೆ ರೂಪದಲ್ಲಿ ನೀಡಿ ಸಹಕರಿಸಬೇಕು ಎಂದರು.
ಸಭೆಯಲ್ಲಿ ಎ.ಸಂಜೀವ್​, ರಘುನಾಥ್​ ಕೋಟ್ಯಾನ್​, ನವೀನ್​ ಶೆಟ್ಟಿ, ಜಯಕರ್​ ಶೇರಿಗಾರ್​, ಗುರುರಾಜ್​ ಉಪಾಧ್ಯ, ಎಂ.ರಾಜೇಂದ್ರ, ನಿರುಪಮಾ ಪ್ರಸಾದ್​, ದಾಮೋದರ್​ ಶೇರಿಗಾರ್​, ವಿಷ್ಣುಪ್ರಸಾದ್​ ಪಾಡಿಗಾರ್​, ನಾರಾಯಣ ರಾವ್​ ಕನ್ನರ್ಪಾಡಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಪಾದಾಧಿಕಾರಿಗಳು ಉಪಸ್ಥಿತರಿದ್ದರು. ಸಂದೀಪ್​ ಮಂಜ ಕಾರ್ಯಕ್ರಮ ನಿರೂಪಿಸಿದರು.