ಸಾತ್ವಿಕಆಹಾರದಿಂದ ಆರೋಗ್ಯಪೂರ್ಣ ಸಮಾಜ
*ಸಾವಿರಕಂಬದಬಸದಿಯಲ್ಲಿ ಭಟ್ಟಾರಕ ಶ್ರೀಆಶೀರ್ವಚನ
ವಿಜಯವಾಣಿಸುದ್ದಿಜಾಲ ಮೂಡುಬಿದಿರೆ
ಮನುಷ್ಯತನ್ನೊಳಗಿನ ಅರಿಷಡ್ವರ್ಗಗಳನ್ನುದೂರ ಮಾಡಿ ಮನಸ್ಸನ್ನು ನಿರ್ಮಲಗೊಳಿಸಲುಯೋಗ,ಧ್ಯಾನ,ಜಪಹಾಗೂ ತಪಸ್ಸು ಅತಿ ಅಗತ್ಯ.ಸಸ್ಯಾಹಾರಹಾಗೂ ಸಾತ್ವಿಕ ಆಹಾರದ ನಿಯಮಿತಸೇವನೆಯಿಂದ ಶರೀರದ ಸ್ವಾಸ್ಥ್ಯಕಾಪಾಡಿಕೊಳ್ಳಲು ಸಾಧ್ಯ ಎಂದುಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಪಂಡಿತಾಚಾರ್ಯವರ್ಯಸ್ವಾಮೀಜಿ ನುಡಿದರು.
ಸಾವಿರಕಂಬದ ಬಸದಿಯಲ್ಲಿ ಬುಧವಾರ ಭಗವಾನ್ಮಹಾವೀರ ಸ್ವಾಮಿ ಜನ್ಮ ಕಲ್ಯಾಣ-ಧಾರ್ಮಿಕಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿದರು.
ಭಗವಾನ್ಮಹಾವೀರರು ಅರಮನೆಯ ಸುಖ ಭೋಗಗಳನ್ನುತ್ಯಜಿಸಿ ಸರ್ವರಿಗೂ ಒಳಿತನ್ನುಬಯಸಿದವರು.ಮನುಷ್ಯತನ್ನೊಳಗಿನ ಅರಿಷಡ್ವರ್ಗಗಳನ್ನುದೂರ ಮಾಡಿ ಮನಸ್ಸನ್ನು ನಿರ್ಮಲಗೊಳಿಸಲುಯೋಗ,ಧ್ಯಾನ,ಜಪಹಾಗೂ ತಪಸ್ಸು ಅತಿ ಅಗತ್ಯ.ಆಹಾರಕ್ರಮದಲ್ಲಿ ಸಸ್ಯಾಹಾರ ಹಾಗೂಸಾತ್ವಿಕ ನಿಯಮಗಳನ್ನು ಪಾಲಿಸುವುದರಿಂದಮತ್ತು ಸೂರ್ಯಾಸ್ತದ ಮೊದಲು ಭೋಜನಮಾಡುವುದರಿಂದ ಶರೀರದ ಸ್ವಾಸ್ಥ್ಯಕಾಪಾಡಿಕೊಳ್ಳಬಹುದು ಎಂಬುದನ್ನುವೈಜ್ಞಾನಿಕವಾಗಿ ವಿಶ್ಲೇಷಿಸಿದರು.
ಬಸದಿಗಳಮೊಕ್ತೇಸರರಾದ ಪಟ್ಣಶೆಟ್ಟಿಸುದೇಶ್ ಕುಮಾರ್,ಸುದೀಶ್,ಆದರ್ಶ್,ಪ್ರಮುಖರಾದಹೇಮರಾಜ್,ಪ್ರವೀಣ್ಚಂದ್ರ,ಪ್ರದೀಪ್ಚಂದ್ರ ರಂಜನ್ ಪೊವಣಿ ಉಪಸ್ಥಿತರಿದ್ದರು.ಬಳಿಕಭಗವಾನ್ ಚಂದ್ರಪ್ರಭ ಸ್ವಾಮಿಯಕಿರಿಯ ರಥೋತ್ಸವ ಹಾಗೂ 108ಕಲಶಗಳಅಭಿಷೇಕ ವಿಧಿವಿಧಾನಗಳೊಂದಿಗೆನೆರವೇರಿತು.