ಜಡ್ಕಲ್ ಮಂಡಲದ ಹಿಂದೂ ಸಂಗಮ ಶೋಭಾಯಾತ್ರೆಗೂ ಮೊದಲು ಹುಲಿಪಾರೆ ಮರ್ಲಚಿಕ್ಕು ಹೈಗುಳಿ ದೈವಸ್ಥಾನದಲ್ಲಿ ಸಂಘದ ಹಿರಿಯರಾದ ತಂಗಪ್ಪನ್ ಗೋಪೂಜೆ ನೆರವೇರಿಸಿದರು.  
ಉಡುಪಿ

ವಿವಿಧ ಸ್ತಬ್ಧಚಿತ್ರ, ಭಜನಾ ತಂಡದೊಂದಿಗೆ ವೈಭವದ ಶೋಭಾಯಾತ್ರೆ

ಬೈಂದೂರು: ಜಡ್ಕಲ್ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ಬಿಸಿನಪಾರೆ ಸಂಘ ಸ್ಥಾನದ ವಠಾರದಲ್ಲಿ ನೆರವೇರಿತು. ಸಂಘದ ಹಿರಿಯರಾದ ತಂಗಪ್ಪನ್ ಗೋಪೂಜೆ ನೆರವೇರಿಸಿದರು. ನಂತರ ಹುಲಿಪಾರೆ ಮರ್ಲಚಿಕ್ಕು ಹೈಗುಳಿ ದೈವಸ್ಥಾನದಿಂದ ಹೊರಟ ಶೋಭಾಯಾತ್ರೆಯಲ್ಲಿ ಹಿಂದೂಗಳು ಪಾಲ್ಗೊಂಡರು. ಭಾರತಮಾತೆಯ ಟ್ಯಾಬ್ಲೊ, ಸ್ಥಳೀಯ ಭಜನಾತಂಡ, ಚಂಡೆ ವಾದನ ತಂಡಗಳೊಂದಿಗೆ ಊರಿನ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಜೈಕಾರ ಹಾಕುತ್ತ ಹೆಜ್ಜೆ ಹಾಕಿದರು.
ಭಾರತಾಂಬೆಯ ಭಾವಚಿತ್ರಕ್ಕೆ ದೀಪ ಪ್ರಜ್ವಲನೆ ಮಾಡಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೆರಾಡಿ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ದಿಕ್ಸೂಚಿ ಭಾಷಣ ಮಾಡಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಜೋಗಿಜೆಡ್ಡು, ಶ್ರೀ ಕ್ಷೇತ್ರ ಛತ್ರಮಠದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಶೆಟ್ಟಿ ಅತ್ತಿಕೇರಿ, ಹಿರಿಯರಾದ ಬಿನೋಯ್ ಕರ್ಕಾಡಿ ಇದ್ದರು.
ರಾಮ್ ಶೆಟ್ಟಿ ಅತ್ತಿಕಾರ್ ಸ್ವಾಗತಿಸಿದರು. ಹಿಂದೂ ಸಂಗಮ ಸಮಿತಿ ಸಂಯೋಜಕಿ ದೀಪಿಕಾ ಶುಭಾಸ್ ಶೆಟ್ಟಿ ವಂಡ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಅಡಿಗ ಗುಡಿಮನೆ ವಂದಿಸಿದರು. ರಾಘವೇಂದ್ರ ಶೆಟ್ಟಿ ಹರುಮನೆ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊಲ್ಲೂರು ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.