ಬೆಳ್ತಂಗಡಿ ಬಂಟರ ಸಂದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಯಂತ ಶೆಟ್ಟಿ ಭಂಡಾರಿಗುಡ್ಡೆ ಉದ್ಘಾಟಿಸಿದರು. ರವೀಂದ್ರ ಶೆಟ್ಟಿ ಸುರಭಿ, ಪ್ರಕಾಶ್ ಶೆಟ್ಟಿ, ಉಮೇಶ್ ಶೆಟ್ಟಿ ಮೊದಲಾದವರಿದ್ದರು.
ಬೆಳ್ತಂಗಡಿ: ಸಂಘಟನೆಯಲ್ಲಿ ಶಕ್ತಿಯಿದ್ದು, ಬಂಟರ ಸಂದ ಉಜಿರೆ ವಲಯಕ್ಕೆ ಉತ್ಸಾಹದ ಚಿಲುಮೆಯ ನಾಯಕತ್ವ ದೊರೆತಿದೆ. ಸಾಹಸ, ಶೌರ್ಯ, ರಕ್ಷಣೆ, ಸಹಕಾರ, ನಾಯಕತ್ವಕ್ಕೆ ಹೆಸರು ಪಡೆದಿರುವ ಬಂಟ ಸಮಾಜಕ್ಕೆ ಒಳ್ಳೆಯ ಪರಂಪರೆಯಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಉಜಿರೆ ಗ್ರಾ.ಪಂ. ಸುವರ್ಣ ಸೌಧ ಸಭಾಭವನದಲ್ಲಿ ಬೆಳ್ತಂಗಡಿಯ ಬಂಟರ ಯಾನೆ ನಾಡವರ ಸಂ ಉಜಿರೆ ವಲಯದ 2026-28ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಬಂಟರ ಸಂದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಉಜಿರೆ ವಲಯದ ಬಂಟರ ಸಂದ ಅಧ್ಯಕ್ಷ ರವೀಂದ್ರ ಶೆಟ್ಟಿ ಸುರಭಿ ಮತ್ತು ಅವರ ತಂಡಕ್ಕೆ ಅಧಿಕಾರ ಹಸ್ತಾಂತರಿಸಿದರು.
ರವೀಂದ್ರ ಶೆಟ್ಟಿ ಸುರಭಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಲಯ ಮುಂದಿನ ವರ್ಷದ ರಜತ ಸಂಭ್ರಮದಲ್ಲಿ ಇಪ್ಪತ್ತೈದು ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದರು.
ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಉಜಿರೆ ವಲಯದ ನೂತನ ಯೋಜನೆ ಬಂಟ ಸಿರಿಯ ಸ್ಕಾೃನರ್ ಅನಾವರಣಗೊಳಿಸಿ 5 ಸಾವಿರ ರೂ. ದೇಣಿಗೆ ನೀಡಿದರು. ತಾಲೂಕು ಬಂಟರ ಯಾನೆ ನಾಡವರ ಸಂದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಸ್ವಸಹಾಯ ತಂಡಗಳಿಗೆ ಚಾಲನೆ ನೀಡಿದರು.
ಉಜಿರೆ ವಲಯದ ಸಂಚಾಲಕ ಸಂಜೀವ ಶೆಟ್ಟಿ ಕುಂಟಿನಿ, ನಿಕಟ ಪೂರ್ವಾಧ್ಯಕ್ಷೆ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿ ಅಜಿತ್ ಶೆಟ್ಟಿ ಕುಂಜರ್ಪ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಚಿತ್ರೇಶ್ ಶೆಟ್ಟಿ, ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ವಿಜಯಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು. ಪವಿತ್ರಾ ಸುಕುಮಾರ ಶೆಟ್ಟಿ ವಂದಿಸಿದರು. ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮ ನಿರೂಪಿಸಿದರು.
ತಾಳಮದ್ದಳೆ ಪ್ರದರ್ಶನ
ಗೌರವ ಮಾರ್ಗದರ್ಶಕರು, ನಿರ್ದೇಶಕರು, ಸ್ವಸಹಾಯ ಸಂದ ಸಂಚಾಲಕರು, ಸಾಂಸ್ಕೃತಿಕ, ಕ್ರೀಡೆ ಹಾಗೂ ಪ್ರವಾಸ ಸಂಚಾಲಕರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮುಂಡಾಜೆ ಬಂಟರ ಗ್ರಾಮ ಸಮಿತಿ ಸಹಯೋಗದೊಂದಿಗೆ ತುಳುನಾಡ ಬಲಿಯೇಂದ್ರ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.