ಉಡುಪಿಯ ಗೀತಾ ಮಂದಿರದಲ್ಲಿ ಕೋಟಿ ಗೀತಾ ಲೇಖನ ಯಜ್ಞದ ಪುಸ್ತಕ ಸಮರ್ಪಣೆಗಾಗಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಮೂರ್ತಿಗೆ ಪ್ರಧಾನಿ ನರೇಂದ್ರ ಮೋದಿ ನಮಿಸಿದರು. ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ ಇದ್ದರು. 
ಉಡುಪಿ

ಪ್ರಬಲ ಅಧ್ಯಾತ್ಮ ಶಕ್ತಿಯ 'ದೇವ' ಮಾನವ

ಸಂಘಟನೆಯ ಬಲ ಹೆಚ್ಚಿಸಿದ ರೋಡ್​ ಶೋ 

ಉಡುಪಿ: ಉಡುಪಿಯ ಶ್ರೀಕೃಷ್ಣನ ನಗರಿಗೆ ದೇವ ಮಾನವ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮೂಲಕ ಸಮಸ್ತ ಕರ್ನಾಟಕಕ್ಕೆ ಪ್ರಬಲ ಆಧ್ಯಾತ್ಮಿಕ ಶಕ್ತಿ ತೋರ್ಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರಿಗೆ ಪ್ರೇರಣಾದಾಯಕವಾಗಿ ಮಾತನಾಡುವ ಮೂಲಕ ಇನ್ನಷ್ಟು ಅಭಿಮಾನ ಹೆಚ್ಚಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉಡುಪಿಗೆ ಭೇಟಿ ನೀಡಿರುವುದು ಉತ್ಸವದ ವಾತಾವರಣ ಕಂಡುಬಂತು. ಸಂಪೂರ್ಣ ಉಡುಪಿಯೇ ಉತ್ಸಾಹದಲ್ಲಿ ಮುಳುಗಿತ್ತು. ರೋಡ್​ ಶೋ ಹಾಗೂ ಗೀತಾ ಪಠಣ ಕಾರ್ಯಕ್ರಮದ ಸಮಾರಂಭದಲ್ಲಿ ಸುಮಾರು 1.50 ಲಕ್ಷ ಜನರು ಭಾಗವಹಿಸಿರುವುದು ಬಿಜೆಪಿಯ ಸಂಘಟನೆಗೆ ಬಲ ತುಂಬಿದೆ ಎಂದು ತಿಳಿಸಿದ್ದಾರೆ.

ವಿಶ್ವ ದಾಖಲೆ ಬರೆದ ವಿಶ್ವ ನಾಯಕ

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಉಡುಪಿಯಲ್ಲಿ ನಡೆದ ಸಾಮೂಹಿಕ 'ಲಕ್ಷ ಕಂಠ ಗೀತಾ ಪಾರಾಯಣ' ಹಾಗೂ ಪೂರ್ವಭಾವಿಯಾಗಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯ -ಬನ್ನಂಜೆಯಿಂದ ಕಲ್ಸಂಕ ವೃತ್ತದವರೆಗೆ ನಡೆದ 'ಮೋದಿ ರೋಡ್​ ಶೋ' ಅದ್ಭುತ ಯಶಸ್ಸು ಕಂಡಿದೆ. ಉಡುಪಿಗೆ ವಿಶ್ವ ನಾಯಕ ನರೇಂದ್ರ ಮೋದಿ ಭೇಟಿ ಹಾಗೂ ಲಕ್ಷ ಕಂಠ ಗೀತಾ ಪಾರಾಯಣವು ವಿಶ್ವ ದಾಖಲೆ ನಿರ್ಮಿಸಿದೆ. ಇದಕ್ಕೆ ಹಗಲಿರುಳು ಶ್ರಮಿಸಿದ ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರಿಗೂ, ವ್ಯವಸ್ಥಿತ ಭದ್ರತೆ ಕಲ್ಪಿಸಿದ ಜಿಲಾಡಳಿತ ಹಾಗೂ ಪೊಲೀಸ್​ ಇಲಾಖೆಗೆ ಅಭಿನಂದನೆ ಸಲ್ಲಿಸಲೇಬೇಕಿದೆ ಎಂದು ನವೀನ್​ ಶೆಟ್ಟಿ ತಿಳಿಸಿದ್ದಾರೆ.
"

ಸರ್ವೇ ಜನಾ: ಸುಖಿನೋ ಭವಂತು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಭಾರತ ದೇಶದ ಎಲ್ಲ ವಾಸಿಗರಿಗೂ ಒಳಿತಾಗಲೆಂಬ ಆಸೆಯನ್ನೇ ಹೊಂದಿದ್ದಾರೆ. ಅಧ್ಯಾತ್ಮದ ಶಕ್ತಿ ಮೂಲಕ ಸಮಗ್ರ ಭಾರತ ಕಟ್ಟುವ ಅವರ ಸಂಕಲ್ಪಕ್ಕೆ ಉಡುಪಿಯಲ್ಲಿ ನಡೆದ ಮೋದಿ ರೋಡ್​ ಶೋ ಹಾಗೂ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಇನ್ನಷ್ಟು ಬಲ ನೀಡಿದೆ.