ಗಾಣಿಗರ ಸೇವಾ ಸಂಘದ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಅನಂತ್ ಮೈಸೂರು ಉದ್ಘಾಟಿಸಿದರು. ಬಿ.ರಮಾನಾಥ ರೈ, ಕ್ಯಾ.ಬ್ರಿಜೇಶ್ ಚೌಟ, ಕೃಷ್ಣಪ್ಪ ಗಾಣಿಗ, ಶ್ರೀನಿವಾಸ್ ಪಿ.ಸಪಲ್ಯ ಮೊದಲಾದವರಿದ್ದರು.  
ಉಡುಪಿ

ಸಂಘಟಿತರಾಗದ ಕಾರಣ ಹಿಂದುಳಿದ ಸಮುದಾಯ

ಬಂಟ್ವಾಳ: ರಾಜ್ಯದಲ್ಲಿ ಸುಮಾರು 35 ಲಕ್ಷ ಗಾಣಿಗ ಸಮುದಾಯವಿದ್ದರೂ ವಿವಿಧ ಪಂಗಡಗಳ ಹೆಸರಿನಲ್ಲಿ ಸಂಘಟಿತರಾಗದ ಪರಿಣಾಮ ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿಯುವಂತಾಗಿದೆ. ಗಾಣಿಗ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 500 ಕೋಟಿ ರೂ. ಮೊತ್ತದ ಅನುದಾನ ಒದಗಿಸಿದಲ್ಲಿ ಸಮುದಾಯದ ಶೈಕ್ಷಣಿಕ ಚಟುವಟಿಕೆ ಮತ್ತು ಸ್ವ ಉದ್ಯಮ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ಅನಂತ್ ಮೈಸೂರು ಹೇಳಿದರು.

ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಗಾಣಿಗರ ಸೇವಾ ಸಂಘದ ವತಿಯಿಂದ ಭಾನುವಾರ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ಜಿಲ್ಲಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಎಸ್.ಮಾವೆ, ಉದ್ಯಮಿಗಳಾದ ವಸಂತ ಜಿ.ಸಪಲ್ಯ ಕುಂಜಾರು, ಜನಾರ್ದನ ಅರ್ಕುಳ, ಪ್ರಮುಖರಾದ ನಾಗೇಶ ಕಲ್ಲಡ್ಕ, ಕೇಶವ ಅತ್ತಾವರ, ವೆಂಕಟೇಶ್ ಅತ್ತಾವರ, ಸಚಿನ್ ಮೆಲ್ಕಾರ್, ನರ್ಸಪ್ಪ ಅಮೀನ್, ವೇದವ ಗಾಣಿಗ, ಭುವನೇಶ್ ಮೊಗರ್ನಾಡು, ಆಶಾ ವೇದವ ಗಾಣಿಗ ಮತ್ತಿತರರು ಇದ್ದರು. ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ವಸಂತ ವಂದಿಸಿದರು. ದೀಪಕ್ ಅಡ್ಯಾರು ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ.ಸಪಲ್ಯ ನವೀಕೃತ ಸುಮಂಗಲಾ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಾದಸ್ವರ ವಾದಕರಾದ ಧನಂಜಯ ಶೇರಿಗಾರ್ ಶಿಬರೂರು ಮತ್ತು ಮನೋಜ್ ಗಾಣಿಗ ಕಟೀಲು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.