ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಆಟಿದ ಲೇಸ್ ಸಮಾರಂಭ ನಡೆಯಿತು. ವಕೀಲ ಐ.ಸುಬ್ಬಯ್ಯ ರೈ, ನಿರಂಜನ್ ರೈ ಪೆರಡಾಲ, ಡಾ.ಯತೀಶ್ ಕುಮಾರ್ ರೈ ಮೊದಲಾದವರಿದ್ದರು. 
ಉಡುಪಿ

ರಕ್ತಗತವಾಗಿ ನಾಯಕತ್ವ ಗುಣ ಬೆಳೆಸಿಕೊಂಡ ಸಮುದಾಯ

ಬದಿಯಡ್ಕ: ತುಳುನಾಡಿನಲ್ಲಿ ಬಂಟರು ರಕ್ತಗತವಾಗಿ ನಾಯಕತ್ವ ಗುಣ ಬೆಳೆಸಿಕೊಂಡು ಎಲ್ಲ ಕ್ಷೇತ್ರದಲ್ಲಿ ಮುಂದೆ ನಿಂತು ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಂಡವರು. ಬದಿಯಡ್ಕ ಬಂಟರ ಸಂಘದ ಮೂಲಕ ಬಂಟರ ಆಚಾರ-ವಿಚಾರ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಬಂಟರ ಅಧ್ಯಕ್ಷ ವಕೀಲ ಐ.ಸುಬ್ಬಯ್ಯ ರೈ ಹೇಳಿದರು.

ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ್ ರೈ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಆಟಿ ತಿಂಗಳಲ್ಲಿ ಬಂಟರ ಆಚರಣೆಗಳ ಬಗ್ಗೆ ಡಾ.ಯತೀಶ್ ಕುಮಾರ್ ರೈ ಉಪನ್ಯಾಸ ನೀಡಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಚಿದಾನಂದ ಆಳ್ವ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ, ಅಶೋಕ್ ರೈ, ರವೀಂದ್ರನಾಥ ಶೆಟ್ಟಿ, ಜಗನ್ನಾಥ ರೈ ಪೆರಡಾಲಗುತ್ತು, ಗಿರೀಶ ರೈ , ಗಂಗಾಧರ ಆಳ್ವ, ಜಗನ್ನಾಥ ರೈ ಕೊರೆಕ್ಕಾನ, ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಗಳು, ವಿಜೇತರಿಗೆ ಬಹುಮಾನ, ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯರಿಗೆ ಗೌರವಾರ್ಪಣೆ ನಡೆಯಿತು. ಶ್ರದ್ಧಾ ರೈ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ದಯಾನಂದ ರೈ ವಂದಿಸಿದರು. ಅಶ್ವಿನಿ ಪ್ರದೀಪ್ ಶೆಟ್ಟಿ ನಿರೂಪಿಸಿದರು.