ಉಡುಪಿಯ ಮಲ್ಪೆಯಲ್ಲಿ ತೆಂಕನಿಡಿಯೂರಿನ ಸರ್ಕಾರಿ ಕಾಲೇಜಿನ ರೋವರ್ ರೇಂಜರ್ಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು. ಸುಷ್ಮಾ ಟಿ., ಮರ್ವಿನ್ ಡಿಸೋಜ ಇದ್ದರು.
* ರೇಂಜರ್ಸ್ ಲೀಡರ್ ಸುಷ್ಮಾ ಟಿ. ಆಶಯ
ಉಡುಪಿ: ಬೀಚ್ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮ ಆಗಿರಬಾರದು. 'ಸ್ವಚ್ಛ ಕಡಲತೀರ-ಆರೋಗ್ಯಕರ ಪರಿಸರ' ಎಂಬ ಮನೋಭಾವ ಪ್ರತಿಯೊಬ್ಬರಿಗೂ ಇರಬೇಕು. ಪರಿಸರದ ಶುಭ್ರತೆಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇತರರಿಗೂ ಸಹ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ತೆಂಕನಿಡಿಯೂರು ಕಾಲೇಜಿನ ರೇಂಜರ್ಸ್ ಲೀಡರ್ ಸುಷ್ಮಾ ಟಿ. ಸಲಹೆ ನೀಡಿದರು.
ಉಡುಪಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ಸ್ ವಿದ್ಯಾರ್ಥಿಗಳು ಲೈಫ್ ಗಾರ್ಡ್ ಹಾಗೂ ಹೋಮ್ ಗಾರ್ಡ್ ಸಹಕಾರದಲ್ಲಿ ಮಲ್ಪೆ ಬೀಚ್ನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಪುಣ್ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆ ಬರೆಯುವ ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೋವರ್ಸ್ ಲೀಡರ್ ಮರ್ವಿನ್ ಡಿಸೋಜ ಕಾರ್ಯಕ್ರಮ ಆಯೋಜಿಸಿದರು.