ಕೊಣಾಜೆ ಯುವ ಮಿತ್ರ ಬಳಗದ ವತಿಯಿಂದ ಎಸ್ಸೆಸ್ಸೆಲ್ಸಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯುವಮಿತ್ರ ಬಳಗದ ಅಧ್ಯಕ್ಷ ಮಹಮ್ಮದ್ ನಝೀರ್, ಶಾಲಾ ದೈಹಿಕ ಶಿಕ್ಷಕ ರಾಜೀವ ನಾಯಕ್ ಮೊದಲಾದವರಿದ್ದರು. 
ಉಡುಪಿ

ಶಿಕ್ಷಣದ ಮೂಲಕ ಉತ್ತಮ ಭವಿಷ್ಯ

ಇಂದಿರಾ ಎನ್ ಕೆ
ಉಳ್ಳಾಲ: ವಿದ್ಯಾರ್ಥಿಗಳು ಮಾದಕವಸ್ತುಗಳ ಬಳಕೆ ಹಾಗೂ ಸಮಾಜದ ಕೆಟ್ಟ ಪ್ರಭಾವಗಳಿಂದ ದೂರವಿದ್ದು, ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಯುವಮಿತ್ರ ಬಳಗದ ಅಧ್ಯಕ್ಷ ಮಹಮ್ಮದ್ ನಜೀೀರ್ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಅತ್ಯಧಿಕ ಅಂಕ ಗಳಿಸಿದ ಕೊಣಾಜೆಪದವು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಣಾಜೆ ಯುವ ಮಿತ್ರ ಬಳಗ ವತಿಯಿಂದ ಶುಕ್ರವಾರ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಟ್ಟೆ ವಿಶ್ವದ್ಯಾಲಯದ ರಿಯಾಜ್ ಅಬ್ದುಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ದೈಹಿಕ ಶಿಕ್ಷಕ ರಾಜೀವ ನಾಯಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾದರ್ ಕೋಡಿಜಾಲ್, ಯುವಮಿತ್ರ ಬಳಗ ಕಾರ್ಯದರ್ಶಿ ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಇಬ್ರಾಹಿಂ ಮೂಸಾ ಮತ್ತು ಅಬ್ದುಲ್ ಅಜೀಜ್, ಪದಾಧಿಕಾರಿಗಳಾದ ಅಶ್ರಫ್ ಕೊಣಾಜೆ, ಸಿದ್ದಿಕ್ ಕೊಣಾಜೆ, ಶರೀಫ್ ಕೊಣಾಜೆ, ಸಿದ್ದೀಕ್ ಏರ್ಮಾಡಿ, ರಫೀಕ್ ಕೊಣಾಜೆ, ಉಮರ್ ಗುಂಡ್ಯ, ಸಮೀರ್ ಕೊಣಾಜೆ, ಫಹೀಮ್ ಕೊಣಾಜೆ, ಶರೀಫ್ ಕಂಗು ಹಿತ್ಲು, ನಿಯಾಜ್ ಕೊಣಾಜೆ, ಅಬ್ದುಲ್ ರೆಹಮಾನ್ ಕಂಗುಹಿತ್ಲು, ಸಮದ್, ಯುವಮಿತ್ರ ಬಳಗದ ಗೌರವ ಸಲಹೆಗಾರ ಹಸೈನಾರ್ ಕೊಣಾಜೆ, ಶಾಲಾಭಿವೃದ್ಧಿ ಸಮಿತಿ ಸದಸ್ಯ ದಯಾನಂದ ಗಟ್ಟಿ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಎಂಆರ್‌ವೈಸಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಜಾನ್ ಕಾರ್ಯಕ್ರಮ ನಿರೂಪಿಸಿದರು.