ಪಾನೇಲ ಸರ್ಕಾರಿ ಶಾಲಾ ಸಭಾಂಗಣದ ನೀಲಿನಕ್ಷೆ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೆ ಸಂತೋಷ್ ಕುಮಾರ್ ರೈ ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಕಣಂತೂರಿನ ಗಡಿಕಾರ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಮಾಡೂರು ಮರಿಯಣ್ಣಪಾಲು ಶಿವದುಗಾರ್ಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಂತೂರಿನ ದೇವಿಪ್ರಸಾದ್ ಪೊಯ್ಯತ್ತಾಯ ಇನ್ನಿತರರು ಉಪಸ್ಥಿತರಿದ್ದರು.  
ಉಡುಪಿ

ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡಲು ಪಣ

ಉಳ್ಳಾಲ: ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್‌ರವರು ಆರ್ಥಿಕವಾಗಿ ಹಿಂದುಳಿದ ರಾಜೇಶ್ ಮಡಿವಾಳ್ ಕುಟುಂಬಕ್ಕೆ ಎಂಟನೇ ಮನೆ ‘ನಮೋ ಕುಟೀರ’, ಪಾನೇಲ ಬರಿಕೆ ಸರ್ಕಾರಿ ಶಾಲೆಗೆ ಸಭಾಂಗಣ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಯಿತು. ಮುಡಿಪು ದತ್ತಾತ್ರೇಯ ಅನುದಾನಿತ ಶಾಲೆಗೆ ಧನಸಹಾಯ ಹಸ್ತಾಂತರಿಸಲಾಯಿತು.
ಅಭಿಮಾನಿಗಳು ನಡೆಸಿದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂತೋಷ್ ರೈ, ಯಾವುದೇ ಕಾಯಿಲೆ ಬಂದರೂ ಆಯುಷ್ಯ ಇದ್ದರಷ್ಟೇ ಬದುಕಲು ಸಾಧ್ಯ. ಕ್ಯಾನ್ಸರ್ ಕಾಯಿಲೆ ಯಾರಿಗೂ ಬರಬಾರದು. ಆಯುಷ್ಮಾನ್‌ನಲ್ಲಿ ಚಿಕಿತ್ಸೆಗೆ ಐದು ಲಕ್ಷ ರೂ. ಅನುದಾನ ಇದ್ದರೂ ತಪಾಸಣೆಗೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹತ್ತು ಮನೆಗಳ ನಿರ್ಮಾಣ ಕಾರ್ಯ ಮುಗಿದ ಬಳಿಕ ಟ್ರಸ್ಟ್ ಸ್ಥಾಪಿಸಿ ಕ್ಯಾನ್ಸರ್ ಪೀಡಿತ ಆರ್ಥಿಕವಾಗಿ ಹಿಂದುಳಿದವರಿಗೆ ಚಿಕಿತ್ಸೆ ನೀಡಲು ಪಣ ತೊಡಲಾಗಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಕಣಂತೂರಿನ ಗಡಿಕಾರ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಬ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಂತೂರಿನ ದೇವಿಪ್ರಸಾದ್ ಪೊಯ್ಯತ್ತಾಯ, ಅರಸು ಕುರಿಯತ್ತಾಯ ದೈವದ ಗಡಿಕಾರ ರಾಮ ರೈ, ಇನೋಳಿ ಶ್ರೀ ಸೋಮನಾಥ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ಶ್ರೀ ರಾಘವೇಶ್ವರ ಮಠದ ಸಿಇಒ ನಾಗರಾಜ್ ಭಟ್, ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ, ಮನಪಾ ನಿಕಟಪೂರ್ವ ಸದಸ್ಯ ಕಿರಣ್, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ, ಮಜಿ ಮಹಮ್ಮಾಯಿ ಕ್ಷೇತ್ರದ ಮನೋಹರ್ ಭಟ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಬಿಜೆಪಿ ಮುಖಂಡ ಚಂದ್ರಹಾಸ ಉಳ್ಳಾಲ್, ಹಿರಿಯರಾದ ಕೇಶವ ಭಟ್, ಕೆ.ಆರ್.ಗಟ್ಟಿ ಕೊರಂತೋಡಿ ಉಪಸ್ಥಿತರಿದ್ದರು. ರವಿ ರೈ ಪಜೀರ್ ಕಾರ್ಯಕ್ರಮ ನಿರೂಪಿಸಿದರು.