ವರ್ಣೋತ್ಸವ-2026 ಕಾರ್ಯಕ್ರಮವನ್ನು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು. ಪ್ರಮುಖರಾದ ದೀಪಕ್ ನಾಯಕ್, ಸ್ನೇಹಲ್ ವಿ.ರಾವ್, ವಿಘ್ನೇಶ್ ಕಳತ್ತೂರ್, ರತ್ನಕುಮಾರ್, ಡಾ.ರಾಧಾಕೃಷ್ಣ ಎಸ್.ಐತಾಳ್ ಉಪಸ್ಥಿತರಿದ್ದರು. 
ಉಡುಪಿ

ತಾಂತ್ರಿಕ ಪ್ರಗತಿ, ಸೃಜನಶೀಲತೆ ಸಮತೋಲನ ಅಗತ್ಯ

ಇಂದಿರಾ ಎನ್ ಕೆ
ಶಿರ್ವ: ವಿದ್ಯಾರ್ಥಿಗಳು ನವೀನತೆ ಸಾಧಿಸುವಾಗ ಸಂಸ್ಕೃತಿ ಮೌಲ್ಯ ಕಾಪಾಡಿಕೊಳ್ಳಬೇಕು. ತಾಂತ್ರಿಕ ಪ್ರಗತಿ ಹಾಗೂ ಸೃಜನಶೀಲತೆ ಸಮತೋಲನ ಸಾಧಿಸುವುದು ಅಗತ್ಯ ಎಂದು ಸಂಸ್ಥೆ ಹಳೇ ವಿದ್ಯಾರ್ಥಿ, ಕ್ಲೀಯರ್ ಫೀಡ್ ಬೆಂಗಳೂರು ಲೀಡ್ ಇಂಜಿನಿಯರ್ ದೀಪಕ್ ನಾಯಕ್ ಹೇಳಿದರು.
ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ, ಮ್ಯಾನೇಜ್‌ಮೆಂಟ್ ಸ್ಪರ್ಧೆಗಳ ಕಾರ್ಯಕ್ರಮ ವರ್ಣೋತ್ಸವ-2026 ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು. ಸೈಮನ್ಸ್ ಆ್ಯಂಡ್ ಅಸೋಸಿಯೇಟ್ಸ್ ಉಡುಪಿ ಕ್ವಾಂಟಿಟಿ ಸರ್ವೇಯರ್ ಸ್ನೇಹಲ್ ವಿ.ರಾವ್ ಮಾತನಾಡಿದರು. ಮೆಕಾನಿಕಲ್ ವಿಭಾಗದ ಲ್ಯಾಬ್ ಸಿಬ್ಬಂದಿ ವಿಘ್ನೇಶ್ ಕಳತ್ತೂರ್ ರೂಪಿಸಿದ ಕೋನಾರ್ಕ್ ಚಕ್ರದ ಸೃಜನಾತ್ಮಕತೆ ಪ್ರಶಂಸಿಸಿದರು.
ಕಾರ್ಯದರ್ಶಿ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್, ಕಾಲೇಜಿನ ಸಾಂಸ್ಕೃತಿಕ ಸಂಯೋಜಕಿ ಸವಿತ ಶೆಣೈ ಉಪಸ್ಥಿತರಿದ್ದರು. ಡಾ.ನಾಗರಾಜ್ ಭಟ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ.ಸಂಧ್ಯಾ ಮಂಥನ ಇನ್ ಹೌಸ್ ತಾಂತ್ರಿಕ ಸ್ಪರ್ಧೆ ವಿಜೇತರ ಪಟ್ಟಿ ವಾಚಿಸಿದರು. ಸಾಂಸ್ಕೃತಿಕ ಘಟಕದ ಸಂಯೋಜಕಿ ಸವಿತಾ ಎ.ಶೆಣೈ ವಂದಿಸಿದರು.
------ಫೋಟೋ------
ಬೆಳ್ಮಣ್-12.ಮಾರ್ಚ್.01.ಬಂಟಕಲ್ಲು ವರ್ಣೋತ್ಸವ
ವರ್ಣೋತ್ಸವ-2026 ಕಾರ್ಯಕ್ರಮವನ್ನು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು. ಪ್ರಮುಖರಾದ ದೀಪಕ್ ನಾಯಕ್, ಸ್ನೇಹಲ್ ವಿ.ರಾವ್, ವಿಘ್ನೇಶ್ ಕಳತ್ತೂರ್, ರತ್ನಕುಮಾರ್, ಡಾ.ರಾಧಾಕೃಷ್ಣ ಎಸ್.ಐತಾಳ್ ಉಪಸ್ಥಿತರಿದ್ದರು.
*****************
.