crime 
ಉಡುಪಿ

ಮನೆಯಲ್ಲಿ 8.98 ಗ್ರಾಂ ಮೆಥಾಫಿಟಮಿನ್ ವಶ

ಕಾಸರಗೋಡು: ಕುಂಬಳೆ ಸನಿಹದ ಮುಕಾರಿಕಂಡ ನಿವಾಸಿ ಮಹಮ್ಮದ್ ರಿಜ್ವಾನ್(27) ಎಂಬಾತನ ಮನೆಗೆ ದಾಳಿ ನಡೆಸಿ ಮನೆಯಲ್ಲಿ ದಾಸ್ತಾನಿರಿಸಿದ್ದ ಮಾದಕವಸ್ತು 8.98 ಗ್ರಾಂ ಮೆಥಾಫಿಟಮಿನ್ ಅಬಕಾರಿ ತಂಡ ವಶಪಡಿಸಿಕೊಂಡಿದೆ.

ಓಣಂ ಸ್ಪೆಷಲ್ ಡ್ರೈವ್ ಅಂಗವಾಗಿ ಅಬಕಾರಿ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ರಿಸ್ವಾನ್(27) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆ ವೇಳೆ ಆತ ಮನೆಯಲ್ಲಿರಲಿಲ್ಲ. ಮಾರಾಟಕ್ಕಾಗಿ ಮನೆಯಲ್ಲಿ ಮಾದಕದ್ರವ್ಯ ಬಚ್ಚಿಟ್ಟಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ.