ಉಡುಪಿಯ ಇಂದ್ರಾಳಿ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚದುರಂಗ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ವಿದ್ಯಾರ್ಥಿನಿ ರಿಮಾ ರಾವ್ ಯು.ಬಿ. ಅವರನ್ನು ಸನ್ಮಾನಿಸಲಾಯಿತು. ಕೆ. ಅಣ್ಣಪ್ಪ ಶೆಣೈ, ಕೆ. ರತ್ನಾಕರ್ ಶೆಣೈ, ಶಶಿರಾಜ್ ಕುಂದರ್, ವೈಷ್ಣವಿ ಕಾಮತ್, ಕೆ. ವಿನಾಯಕ ಕಿಣಿ, ರೇಷ್ಮಾ ಪ್ರಭು ಇದ್ದರು.
* ವಿದ್ಯಾರ್ಥಿಗಳಿಗೆ ಡಾ. ಸೂರಜ್ ಹೆಗ್ಡೆ ಕಿವಿಮಾತು
* ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ
ಉಡುಪಿ: ಭಾರತದಲ್ಲಿ ಸಂವಿಧಾನವನ್ನು ಜಾರಿಗೆ ತಂದ ದಿನದ ನೆನಪಿಗಾಗಿ ಪ್ರತಿವರ್ಷವೂ ದೇಶಾದ್ಯಂತ ಜ.26ರಂದು ತ್ರಿವರ್ಣ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ದೇಶದ ಇತಿಹಾಸ, ಪರಂಪರೆ ಅರಿತುಕೊಂಡು ಜ್ಞಾನ ದೇಗುಲವಾದ ಶಾಲೆ, ಶಿಕ್ಷಕರು, ಪಾಲಕರು ಹಾಗೂ ಎಲ್ಲ ಹಿರಿಯರನ್ನು ಗೌರವಿಸುವ ಗುಣ ಅಳವಡಿಸಿಕೊಳ್ಳಬೇಕು ಎಂದು ಕೆಎಂಸಿ ಮಣಿಪಾಲದ ಪ್ರೊಫೆಸರ್ ಡಾ. ಸೂರಜ್ ಹೆಗ್ಡೆ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ (ಜ.26) ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ವಿಜ್ಞಾನ ವಸ್ತು ಪ್ರದರ್ಶನ
ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತುಗಳ 'ಅನ್ವೇಷಣಮ್-2026' ಮಾದರಿ ಪ್ರದರ್ಶನವನ್ನು ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ 'ಅಂಕುರ'ವನ್ನು ಡಾ.ಸೂರಜ್ ಹೆಗ್ಡೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಕೆ. ರತ್ನಾಕರ್ ಶೆಣೈ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಶಿರಾಜ್ ಕುಂದರ್, ಕೋಶಾಧಿಕಾರಿ ವೈಷ್ಣವಿ ಕಾಮತ್, ಪ್ರೌಢಶಾಲೆಯ ಮುಖ್ಯೋಧ್ಯಾಪಕ ಕೆ. ವಿನಾಯಕ ಕಿಣಿ, ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ರೇಷ್ಮಾ ಪ್ರಭು, ಪ್ರೌಢಶಾಲಾ ವಿದ್ಯಾರ್ಥಿ ನಾಯಕಿ ಅಭಿನೇತ್ರಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಐಶಾನಿ ಶೆಟ್ಟಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಪಾಲಕರು ಇದ್ದರು.
ಆದ್ಯಾ ಕಾಮತ್ ಸ್ವಾಗತಿಸಿದರು. ಓಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ವಿ. ವಂದಿಸಿದರು.
ಚದುರಂಗ ಚತುರೆಗೆ ಸನ್ಮಾನ
ರಾಷ್ಟ್ರಮಟ್ಟದ ಚದುರಂಗ ಚತುರೆ, ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಮಾ ರಾವ್ ಯು.ಬಿ. ಅವರನ್ನು ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಝಾರ್ಖಂಡ್ನ ರಾಂಚಿಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಟೂರ್ನಾಮೆಂಟ್ನ ಚೆಸ್ನಲ್ಲಿ ರಿಮಾ ರಾವ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗಳಿಸಿದ್ದಳು. ಯು.ಬಿ. ಪ್ರಕಾಶ್ ರಾವ್ ಮತ್ತು ಉಷಾ ರಾವ್ ಅವರ ಸುಪುತ್ರಿಯಾಗಿದ್ದು, ಚೆಸ್ ಕೋಚ್ ಶರತ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.