ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತುಗಳನ್ನು ಹರಿರಾಮ್ ಶಂಕರ್, ಸುಧಾಕರ್, ಎಸ್.ವಿಜಯಪ್ರಸಾದ್, ಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ನಾಶಪಡಿಸಲಾಯಿತು.  
ಉಡುಪಿ

ನಂದಿಕೂರಿನಲ್ಲಿ 73 ಕೆ.ಜಿ. ಗಾಂಜಾ ನಾಶ

ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 36,29,550 ರೂ. ಮೊತ್ತದ 73 ಕೆ.ಜಿ. ಗಾಂಜಾವನ್ನು ನಂದಿಕೂರು ಕೈಗಾರಿಕಾ ಪ್ರಾಂಗಣದಲ್ಲಿರುವ ಘಟಕದಲ್ಲಿ ಶುಕ್ರವಾರ ವೈಜ್ಞಾನಿಕವಾಗಿ ನಾಶಪಡಿಸಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿ ಅಧ್ಯಕ್ಷ ಹರಿರಾಮ್ ಶಂಕರ್, ಅಡಿಶನಲ್ ಎಸ್‌ಪಿ ಸುಧಾಕರ್, ಕಾರ್ಕಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಎಸ್.ವಿಜಯಪ್ರಸಾದ್ ಮತ್ತು ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ಸೂಕ್ತ ಪರಿಶೀಲನೆ ಬಳಿಕ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಮಲ್ಪೆ ಠಾಣೆಯ ಒಂದೇ ಪ್ರಕರಣದಲ್ಲಿ 32,53,050 ರೂ. ಮೌಲ್ಯದ 64.731 ಕೆ.ಜಿ. ಗಾಂಜಾ ಸಹಿತ ಮಣಿಪಾಲ ಠಾಣೆಯ 10, ಶಿರ್ವ ಠಾಣೆಯ 2, ಕೋಟ, ಕಾಪು, ಉಡುಪಿ ನಗರ, ಸೆನ್ ಅಪರಾಧ ಠಾಣೆಗಳ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 18 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ಪದಾರ್ಥಗಳನ್ನು ನ್ಯಾಯಾಲಯದ ಆದೇಶಾನುಸಾರ ನಾಶಗೊಳಿಸಲಾಯಿತು.
ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ, ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು, ಕಾಪು ಠಾಣಾಧಿಕಾರಿ ತೇಜಸ್ವಿ, ಉಡುಪಿ ಡಿಸಿಆರ್‌ಬಿ ಉಪನಿರೀಕ್ಷಕ ಗೋಪಾಲ ನಾಯ್ಕ ಮತ್ತಿತರರಿದ್ದರು.