ಪತ್ತೆ ಮಾಡಿದ ಮೊಬೈಲ್ಗಳನ್ನು ಉಡುಪಿಯ ನಗರ ಠಾಣೆಯಲ್ಲಿ ಮಾಲೀಕರಿಗೆ ಡಿವೈಎಸ್ಪಿ ಡಿ.ಟಿ. ಪ್ರಭು ಹಸ್ತಾಂತರಿಸಿದರು. ಠಾಣೆಯ ಅಧಿಕಾರಿಗಳಾದ ಮಹೇಶ್ ಪ್ರಸಾದ್, ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ. ಗೋಪಾಲಕೃಷ್ಣ ಜೋಗಿ ಇದ್ದರು.
* ಉಡುಪಿ ನಗರ ಠಾಣೆಯಲ್ಲಿ ಮಾಲೀಕರಿಗೆ ವಿತರಣೆ
ಉಡುಪಿ: ಮೊಬೈಲ್ ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ ಜಿಲ್ಲೆಯ 60 ಜನರಿಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ (ಡಿ.16) ಹಸ್ತಾಂತರ ಮಾಡಲಾಯಿತು. ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಅವರು, ತನಿಖೆ ಮೂಲಕ ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ಮೊಬೈಲ್ಗಳನ್ನು ಮಾಲೀಕರಿಗೆ ವಿತರಿಸಿದರು.
ಕೆಎಸ್ಪಿ ಆ್ಯಪ್ ಮೂಲಕ ಮೊಬೈಲ್ ಕಾಣೆಯಾಗಿರುವ ಕುರಿತು ದೂರು ಸ್ವೀಕರಿಸಲಾಗಿತ್ತು. ಭಾರತ ಸರ್ಕಾರ ಜಾರಿಗೊಳಿಸಿರುವ 'ಸಿಇಐಆರ್' ಪೋರ್ಟಲ್ ಮೂಲಕ ದೂರುದಾರರ ಎಲ್ಲ ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿತ್ತು. ಅಲ್ಲದೆ, ಇದೇ ಪೋರ್ಟಲ್ ಸಹಕಾರದಲ್ಲಿ 60 ಮೊಬೈಲ್ಗಳನ್ನು ಪತ್ತೆ ಮಾಡಲಾಗಿತ್ತು.
ಮೊಬೈಲ್ ಪತ್ತೆಯ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ., ಗೋಪಾಲಕೃಷ್ಣ ಜೋಗಿ ಮತ್ತು ಠಾಣೆಯ ಗಣಕಯಂತ್ರ ಸಿಬ್ಬಂದಿ ಸಿಪಿಸಿ ವಿನಯಕುಮಾರ, ಸಿಪಿಸಿ ಜಾಸ್ವಾ ಪಾಲ್ಗೊಂಡಿದ್ದರು.
ಕಾಣೆಯಾಗಿದ್ದ ಮೊಬೈಲ್ ಪತ್ತೆ ಮಾಡಿಕೊಟ್ಟ ಪೊಲೀಸರಿಗೆ ದೂರುದಾರರು ಕೃತಜ್ಞತೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು.