ವಿದ್ಯಾರ್ಥಿನಿಯ ತಾಯಿ ವಿಜಯಲಕ್ಷ್ಮೀ ಅವರು ಭವ್ಯಾ ಅವರಿಗೆ ಕರಿಮಣಿ ಸರ ಹಸ್ತಾಂತರಿಸಿದರು. ಠಾಣಾಧಿಕಾರಿ ಸುತೇಶ್ ಇತರರು ಇದ್ದರು. 
ಉಡುಪಿ

ರಸ್ತೆಯಲ್ಲಿ ಸಿಕ್ಕಿದ 5 ಪವನ್ ಕರಿಮಣಿ ಸರ ಹಸ್ತಾಂತರ

ಉಪ್ಪಿನಂಗಡಿ: ರಸ್ತೆಯಲ್ಲಿ ಸಿಕ್ಕಿದ 5 ಪವನ್ ತೂಕದ ಚಿನ್ನಾಭರಣವನ್ನು ಪಾಲಕರ ಮೂಲಕ ಉಪ್ಪಿನಂಗಡಿ ಪೊಲೀಸರಿಗೊಪ್ಪಿಸುವ ಮೂಲಕ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಸಮೀಕ್ಷಾ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಂದ್ರಪ್ರಸ್ಥ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿನಿ ಸಮೀಕ್ಷಾಗೆ ಗುರುವಾರ ಉಪ್ಪಿನಂಗಡಿಯ ಅಂಡರ್ ಪಾಸ್ ಬಳಿ ರಸ್ತೆಯಲ್ಲಿ 5 ಪವನ್ ತೂಕದ ಕರಿಮಣಿ ಸರವೊಂದು ಸಿಕ್ಕಿತ್ತು. ಅದನ್ನು ಆಕೆ ತನ್ನ ಪಾಲಕರಾದ ಸಂಜೀವ ಮತು ವಿಜಯಲಕ್ಷ್ಮೀ ಅವರೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದರು. ಈ ಮಧ್ಯೆ ಇಲ್ಲಿನ ರಾಮನಗರ ನಿವಾಸಿ ನಾರಾಯಣ ಕೆ. ಎಂಬುವರ ಪತ್ನಿ ಭವ್ಯಾ ರಸ್ತೆಯುಲ್ಲಿ ಏನೋ ಹುಡುಕಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಿಚಾರಿಸಿದಾಗ ಐದು ಪವನ್ ತೂಕದ ಕರಿಮಣಿ ಸರ ಕಳೆದುಹೋಗಿರುವುದಾಗಿ ತಿಳಿಸಿದರು.
ಬಳಿಕ ಅವರನ್ನು ಠಾಣೆಗೆ ಕರೆಸಿ ವಿದ್ಯಾರ್ಥಿನಿಯ ತಾಯಿ ವಿಜಯಲಕ್ಷ್ಮೀ ಅವರ ಮೂಲಕ ಶುಕ್ರವಾರ ಭವ್ಯಾ ಅವರಿಗೆ ಹಸ್ತಾಂತರಿಸಲಾಯಿತು. ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಸುತೇಶ್ ಉಪಸ್ಥಿತರಿದ್ದರು.