ಉಡುಪಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣ. 
ಉಡುಪಿ

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ 4ನೇ ಬಾರಿ ಬಾಂಬ್​ ಬೆದರಿಕೆ..!

* ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳದಿಂದ ತಪಾಸಣೆ

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಇದು ನಾಲ್ಕನೇ ಬಾರಿ ಬಂದ ಹುಸಿ ಸಂದೇಶವಾಗಿದೆ.
ಕೋರ್ಟ್​ನ ಆಡಳಿತ ವಿಭಾಗದ ಇ&ಮೇಲ್​ ಐಡಿಗೆ ಬಾಂಬ್​ ಬೆದರಿಕೆಯ ಸಂದೇಶ ಕಳುಹಿಸಲಾಗಿದೆ. ಮಂಗಳವಾರ (ಜೂ.30) ಬೆಳಗ್ಗೆ 8.56ಕ್ಕೆ ಇ&ಮೇಲ್​ಗೆ ಸಂದೇಶ ಬಂದಿದ್ದು, ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್​ ನಿಷ್ಕ್ರಿಯ ತಂಡ ಬಂದು ಪರಿಶೀಲನೆ ನಡೆಸಿತು. ಎಲ್ಲಿಯೂ ಬಾಂಬ್​ ಪತ್ತೆಯಾಗಿದ್ದರಿಂದ ಇದೂ ಸಹ ಹುಸಿ ಬಾಂಬ್​ ಸಂದೇಶ ಎನ್ನುವುದು ತಿಳಿದುಬಂತು.
ಉಡುಪಿ ಕೋರ್ಟ್​ ಆವರಣದಲ್ಲಿ ತಪಾಸಣೆ ನಡೆಸಿದ ಶ್ವಾನದಳ.
ಸೋಮವಾರ (ಜೂ.29)ವೂ ಸಹ ಕೋರ್ಟ್​ನ ಇ-ಮೇಲ್​ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್​ ಇಟ್ಟಿದ್ದು ಸ್ಫೋಟಿಸಲಾಗುವುದು ಎಂದು ಬೆದರಿಕೆ ಸಂದೇಶ ಬಂದಿತ್ತು.

ಇ-ಮೇಲ್​ನಲ್ಲಿ ಏನಿದೆ?

ಪ್ರಶಾಂತ್​ ಕಿಶೋರ್​, ಸುನೀಲ್​ ಕಾನುಗೋಲು ಮುಂತಾದವರ ಸಲಹೆಯಂತೆ ತಮಿಳುನಾಡು ಡಿಎಂಕೆ ಸರ್ಕಾರವು 2021ರಲ್ಲಿ ತಮಿಳುನಾಡಿನಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಬಯಸಿತು. ಅದಕ್ಕಾಗಿ ವಿವಿಧ ಏಜೆನ್ಸಿ, ಮಧ್ಯವರ್ತಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿತು. ಅದಕ್ಕಾಗಿ ಖ್ಯಾತ ಹಾಗೂ ನಿಷ್ಠಾವಂತ ಪತ್ರಕರ್ತರ ತಂಡವನ್ನು ನೇಮಿಸಿಕೊಂಡಿತ್ತು. ಆದರೆ, ಡಿಎಂಕೆ ಉದಯನಿಧಿ ಅವರ ಕಾರ್ಯಸೂಚಿಯಂತೆ ಕೆಲಸ ಮಾಡಲು ಆ ಪತ್ರಕರ್ತರಿಗೆ ಏಜೆನ್ಸಿ ಮತ್ತು ಮಧ್ಯವರ್ತಿಗಳು ಕೇವಲ ಹಣಕ್ಕಿಂತ ಹೆಚ್ಚಿನದನ್ನು ನೀಡಲು ಬಯಸಿದ್ದರು. ವಿರೋಧಿ ವೈಸ್​ ಸ್ಕ್ವಾಡ್​ನಲ್ಲಿರುವ ದುಷ್ಟ ಅಂಶಗಳನ್ನು ಮತ್ತು ಅನ್ನಾ ವಿಶ್ವವಿದ್ಯಾಲಯದ ಪ್ರೊಫೆಸರ್​ ಚಿತ್ರಕಲಾ ಎಸ್​. ಗೋಪಾಲನ್​ ಅವರನ್ನು ಬಳಸಿಕೊಂಡು ಪತ್ರಕರ್ತರಿಗೆ (ಕೆಳಗೆ ಅವರ ಹೆಸರು ಉಲ್ಲೇಖಿಸಲಾಗಿದೆ) ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಅಗತ್ಯತೆಗಳಿಗೆ ಪೂರೈಸಲಾಯಿತು. ಚೆನ್ನೆ$ನ ಆಯಕುಡಿ, ಚಿತ್ತೂರು (ಎಪಿ)ನಲ್ಲಿರುವ ಅನಾಥಾಶ್ರಮಗಳಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಕರೆತಂದಿದ್ದರು. ಡಿಎಂಕೆ ನಾಯಕತ್ವಕ್ಕೆ ಈ ದಂಧೆಯ ಬಗ್ಗೆ ಸಂಪೂರ್ಣ ಜ್ಞಾನವಿದೆ. ಆದರೆ, ಹುಡುಗಿಯರು ಆಘಾತಕ್ಕೊಳಗಾಗುತ್ತಿದ್ದಾರೆ. ಉತ್ತೇಜನಕ್ಕಾಗಿ ಮೆಥ್​ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈ ಮಾಹಿತಿಯನ್ನು ಡಿಎಂಕೆಯ ಜಾಫರ್​ ಸಾಧಿಕ್​ ಒದಗಿಸಿದ್ದಾರೆ ಎಂದು ಬರೆಯಲಾಗಿದೆ.
"

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್​ ಇಟ್ಟು ಸ್ಫೋಟಿಸುವ ಹುಸಿ ಬೆದರಿಕೆ ಸಂದೇಶ ಬರುತ್ತಿದೆ. ಅದನ್ನು ನಿರ್ಲಕ್ಷಿಸದೆ ನ್ಯಾಯಾಲಯ ತೆರೆಯುವ ಮೊದಲು ಪ್ರತಿದಿನ ಬೆಳಗ್ಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ಪರಿಶೀಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಯಾವುದೇ ಇ-ಮೇಲ್​ ಬಂದರೂ ಸಹ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಅಡ್ಡಿಯಾಗದು. ನ್ಯಾಯಾಧೀಶರೊಂದಿಗೆ ಚರ್ಚಿಸಿದ್ದು, ಸಂಪನ್ಮೂಲ ಮತ್ತು ಸಿಬ್ಬಂದಿ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮತ್ತು ಡೋರ್​ ಫ್ರೇಮ್​ ಮೆಟಲ್​ ಡಿಟೆಕ್ಟರ್​ ಅಳವಡಿಸಲಾಗುವುದು. ಈ ಮಧ್ಯೆ ನಕಲಿ ಬೆದರಿಕೆಗಳ ಮೂಲದ ಬಗ್ಗೆ ನಾವು ಇತರ ಜಿಲ್ಲೆ, ರಾಜ್ಯಗಳು ಮತ್ತು ಕೇಂದ್ರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ.

— ಹರಿರಾಮ್​ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ.