ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲೈ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿದರು. ಡಾ. ತಲ್ಲೂರು ಶಿವರಾಂ ಶೆಟ್ಟಿ, ಶ್ರೀಧರ್ ಶೆಣವ, ಸುಧಾಕರ್ ಹೆಗ್ಡೆ, ಕೆ.ಜಗದೀಶ್ ಹೊಳ್ಳ ಇದ್ದರು.
* ಡಿಸ್ಟ್ರಿಕ್ಟ್ ಗವರ್ನರ್ ಅಲೈ ಸುನೀಲ್ ಕುಮಾರ್ ಶೆಟ್ಟಿ ಮಾಹಿತಿ
* ದ್ವಿತೀಯ ಸಂಪುಟ ಪದ ಪ್ರದಾನ ಕಾರ್ಯಕ್ರಮ
ಉಡುಪಿ: ಭಾರತೀಯ ಮೂಲದ ಸೇವಾ ಸಂಸ್ಥೆಯಾದ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 275-ಎಸ್ ಇದರ ದ್ವಿತೀಯ ಸಂಪುಟ ಪದ ಪ್ರದಾನ ಕಾರ್ಯಕ್ರಮ ಏ.25ರಂದು ಸಂಜೆ 5 ಗಂಟೆಗೆ ಉಡುಪಿಯ ಅಂಬಲಪಾಡಿಯಲ್ಲಿರುವ ಅಮೃತ ಗಾರ್ಡನ್ನಲ್ಲಿ ನಡೆಯಲಿದೆ ಎಂದು ಕ್ಲಬ್ನ ಡಿಸ್ಟ್ರಿಕ್ಟ್ ಗವರ್ನರ್ ಅಲೈ ಸುನೀಲ್ ಕುಮಾರ್ ಶೆಟ್ಟಿ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ಏ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲೈ ಡಾ. ಬಾಲಜಿ ಶಾಸ್ತ್ರಿ ಪದ ಪ್ರದಾನ ಸಮಾರಂಭ ನೆರವೇರಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ.ಎಸ್. ಮೂಡಿತ್ತಾಯ, ಅಸೋಸಿಯೇಷನ್ ಅಲೆಯನ್ಸ್ ಕ್ಲಬ್ ಇಂಟರ್ನ್ಯಾಷನಲ್ನ ಕಾರ್ಯದರ್ಶಿ ಅಲೈ ಡಾ. ನಾಗರಾಜ್ ಬೈರಿ, ಅಂತಾರಾಷ್ಟ್ರೀಯ ನಿರ್ದೇಶಕ ಅಲೈ ಡಾ. ಶ್ರೀಧರ್ ಶೆಣವ ಮತ್ತು ಅಂತಾರಾಷ್ಟ್ರೀಯ ಕಮಿಟಿಯ ಚೇರ್ಪರ್ಸನ್ ಡಾ. ತಲ್ಲೂರು ಶಿವರಾಂ ಶೆಟ್ಟಿ, ಅಂತಾರಾಷ್ಟ್ರೀಯ ಕಮಿಟಿಯ ಚೇರ್ಪರ್ಸನ್ ಅಲೈ ಕೆ.ಎಂ. ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ತಲ್ಲೂರು ಶಿವರಾಂ ಶೆಟ್ಟಿ, ಶ್ರೀಧರ್ ಶೆಣವ, ಸುಧಾಕರ್ ಹೆಗ್ಡೆ, ಕೆ.ಜಗದೀಶ್ ಹೊಳ್ಳ ಇದ್ದರು.
ವಿವಿಧ ಜಾಗೃತಿ ಕಾರ್ಯಕ್ರಮ
ಈ ವರ್ಷ ಅಲಯನ್ಸ್ ಜಿಲ್ಲಾ ಕಾರ್ಯಕ್ರಮದ ನಿಮಿತ್ತ ಪರಿಸರ ಸಂರಕ್ಷಣೆ, ಹಸಿವು ನೀಗಿಸುವಿಕೆ, ಶಿಕ್ಷಣ, ರಸ್ತೆ ಸುರಕ್ಷತೆ ಮತ್ತು ಸಂಚಾರ ಸಿಕ್ಕು (ಟ್ರಾಫಿಕ್) ಜಾಗೃತಿ, ಕೃಷಿ ಉತ್ತೇಜನ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾದಕ ಔಷಧದ ದುರ್ಬಳಕೆ ಮತ್ತು ಅದರ ತಡೆಗಟ್ಟುವಿಕೆ ಕುರಿತು ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲೈ ಸುನೀಲ್ ಕುಮಾರ್ ಶೆಟ್ಟಿ ತಿಳಿಸಿದರು.