ಸಾಂದರ್ಭಿಕ ಚಿತ್ರ  
ಉಡುಪಿ

ರಸ್ತೆ ಬದಿ ಪೊದೆಯಲ್ಲಿ ಶವ ಪತ್ತೆ

ಗುಜ್ಜಾಡಿ ಗ್ರಾಮದ ಮಾವಿನಕಟ್ಟೆ ಬಳಿಯ ಗುಜ್ಜಾಡಿ-ತ್ರಾಸಿ ರಸ್ತೆಯ ಪಕ್ಕದಲ್ಲಿ ಗಿಡಗಂಟಿಗಳ ನಡುವೆ ಸ್ಕೂಟರ್ ಇಂಡಿಕೇಟರ್ ಬೆಳಗುತ್ತಿರುವುದನ್ನು ಗಮನಿಸಿದಾಗ ಸ್ಕೂಟರ್‌ನ ಅನತಿ ದೂರದಲ್ಲಿ ಇರ್ಫಾನ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇರ್ಫಾನ್ ಸೋಮವಾರ ಮಧ್ಯಾಹ್ನ ತ್ರಾಸಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಬರುತ್ತಿರುವಾಗ ಅಪಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.