ವಿಜಯವಾಣಿ ಸುದ್ದಿಜಾಲ ಉಡುಪಿ
ಟಿವಿಎಸ್ ಮೋಟಾರ್ ಕಂಪನಿಯ ಅಧಿಕೃತ ಮುಖ್ಯ ಮಾರಾಟ ಸಂಸ್ಥೆಯಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಾಯಿರಾಧಾ ಟಿವಿಎಸ್ ಮನೆಮಾತಾಗಿದೆ. ಬೈಕ್ ಪ್ರಿಯರಿಗೆ ಈ ಬಾರಿಯ ಯುಗಾದಿ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಾಯಿರಾಧಾ ಶೋ ರೂಂ ಸಜ್ಜಾಗಿದ್ದು, ರಿಯಾಯಿತಿ ಹಾಗೂ ಕೊಡುಗೆಗಳ ಮಾರಾಟ ಹಮ್ಮಿಕೊಂಡಿದೆ.
ಸಣ್ಣ ಉದ್ಯಮಗಳ ನೆಚ್ಚಿನ ಎಕ್ಸ್ಲ್ 100 ಮೊಪೆಡ್, ಮಹಿಳೆಯರು, ಪುರುಷರ ಮೊದಲ ಆಯ್ಕೆಯ ಝೆಸ್ಟ್, ಜುಪಿಟರ್ 125, ಎಂಟಾರ್ಕ್ 125 ಮೊದಲಾದ ಸ್ಕೂಟರ್ಗಳು, ಸ್ಪೋರ್ಟ್ಸ್, ಸ್ಟಾರ್ ಸಿಟಿ, ರೇಡಿಯನ್, ರೈಡರ್ 125, ಆರ್ಟಿಆರ್ 160 ಮುಂತಾದ ಮೋಟಾರ್ ಸೈಕಲ್ಗಳು ಗ್ರಾಹಕರ ಕೈ ಸೇರಲು ಅಣಿಯಾಗಿವೆ.
ಸಾಯಿರಾಧಾ ಟಿವಿಎಸ್ ಉಡುಪಿಯಲ್ಲಿ ಮತ್ತು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಸುಸಜ್ಜಿತ ಶೋರೂಂ ಹೊಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಹಾಗೂ ಮಂಗಳೂರಿನ ಬಿಜೈ ಮತ್ತು ಪುತ್ತೂರಿನಲ್ಲಿ ಸ್ವಂತ ಶಾಖೆಗಳೊಂದಿಗೆ ಹಲವಾರು ವರ್ಷದಿಂದ ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡುತ್ತಿದೆ.