ಜಿಲ್ಲೆ

ವಿದ್ಯಾಕುಮಾರಿ ಉಡುಪಿ ಡಿಸಿ

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಕೆ. ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಗುರುವಾರ ಅದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಾಗಿದ್ದ ಕೂರ್ಮಾ ರಾವ್ ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ ಬೇರೆ ಹುದ್ದೆ ತೋರಿಸಿಲ್ಲ.
ಮೂಲತಃ ದ.ಕ. ಜಿಲ್ಲೆಯ ಉಳ್ಳಾಲದ ವಿದ್ಯಾಕುಮಾರಿ ಅವರು ೨೦೧೮ರಿಂದ ೨೦೨೦ರವರೆಗೆ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ತುಮಕೂರು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.