ಜಿಲ್ಲೆ

ನಾನು ಹೊಸ ಡಿಸಿ ಎಂ.ಕೂರ್ಮ ರಾವ್, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ

Udupi

ಉಡುಪಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ ಬುಧವಾರ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಕಾರ್ಯಾರಂಭ ಮಾಡಿದ್ದಾರೆ. ನಾನು ಜಿಲ್ಲೆಯ ಹೊಸ ಡಿಸಿ ಎಂ.ಕೂರ್ಮ ರಾವ್. ಕೋವಿಡ್ ನಿರ್ಮೂಲನೆಗೆ ಪಾಲಕರು, ವಿದ್ಯಾರ್ಥಿಗಳು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಸ್ವಯಂ ಪರಿಚಯ ಮಾಡಿಕೊಂಡು ಮಾತನಾಡಿದರು ಡಿಸಿ ಎಂ.ಕೂರ್ಮ ರಾವ್.

ಜಿಲ್ಲೆಯ ನೂತನ ಡಿಸಿಯಾಗಿ ಬುಧವಾರ ಬೆಳಗ್ಗೆ ಎಂ.ಕೂರ್ಮ ರಾವ್ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಡಿಡಿಪಿಐ ಜತೆ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಮೊದಲ ದಿನ ಶಾಲೆಗೆ ತೆರಳಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಡಿ.ಸಿ, ಮಕ್ಕಳ ಅನುಭವ, ಪಾಠಗಳ ಬಗ್ಗೆ ಸಂವಾದ ನಡೆಸಿದರು. ಕರೊನಾ ನಿರ್ಮೂಲನೆಗೆ ನಿಮ್ಮ ಸಹಕಾರ ಅಗತ್ಯ ಎಂದು ಕಿವಿಮಾತು ಹೇಳಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮುಂದೆ ಜಿಲ್ಲೆಯಲ್ಲಿ ಇದೇ ರೀತಿ ಪ್ರವಾಸ ಮಾಡಿ ಜಿಲ್ಲೆಯ ನಾಡಿಮಿಡಿತ ಅರಿತುಕೊಳ್ಳುವುದಾಗಿ ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.