ಜಿಲ್ಲೆ

ಉಡುಪಿ ನಗರಸಭೆ ಸೀಲ್‌ಡೌನ್

Udupi

ಉಡುಪಿ: ಜಿಲ್ಲೆಯಲ್ಲಿ ಕರೊನಾ ಹಾವಳಿ ಮುಂದುವರಿದ್ದು, ಕರೊನಾ ವಾರಿಯರ್ಸ್‌ಗಳಿಗೂ ಸೋಂಕು ಬೆಂಬಿಡದೆ ಕಾಡುತ್ತಿದೆ. ನಗರಸಭೆ ಹೆಲ್ತ್ ಇನ್‌ಸ್ಪೆಕ್ಟರ್ ಒಬ್ಬರಿಗೆ ಮತ್ತು ಉಡುಪಿ ತಾಲೂಕಿನ ಗ್ರಾಮ ಸಹಾಯಕನಿಗೆ ಸೋಂಕು ದೃಢವಾಗಿದ್ದು, ನಗರಸಭೆ ಕಚೇರಿಯನ್ನು ಮಂಗಳವಾರ ಸೀಲ್ಡೌನ್ ಮಾಡಲಾಗಿದೆ.

ಗ್ರಾಮ ಸಹಾಯಕ ಉಡುಪಿ ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದು, ಈ ಕಚೇರಿಯನ್ನು ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಿದ ಬಳಿಕ ತೆರೆಯಲಾಗುತ್ತದೆ. ನಗರಸಭೆ ಕಚೇರಿ ಸಂಪೂರ್ಣ ಸೀಲ್‌ಡೌನ್ ಮಾಡಿಲ್ಲ. ಕಚೇರಿಯೊಳಗಿನ ಕಾರ್ಯನಿರ್ವಹಣೆ ಎಂದಿನಂತೆ ನಡೆಯುತ್ತದೆ. ಒಂದೆರಡು ದಿನದ ಮಟ್ಟಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸ್ಯಾನಿಟೈಸ್ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ನಗರಸಭೆ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಇಬ್ಬರನ್ನು ಕೋವಿಡ್ ವಿಶೇಷ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೋಂಕಿತರ ಹತ್ತಿರದ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.