ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸ.ನಂ. 180, 157, 189 ಲ್ಲಿನ 11.90 ಎಕ್ರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4 ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸ.ನಂ. 174, 56 ರಲ್ಲಿನ 5.70 ಎಕ್ರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಸ್ಯಾಂಡ್ ಆಪ್ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ತೀಮಾರ್ನಿಸಿದೆ.
ಸಾರ್ವಜನಿಕರು ಸದರಿ ಮರಳನ್ನು ಖಿಈಖಿಕಐ ಉ-ಖಅಈ ಅಕಕ ಮೂಲಕ ಬುಕ್ಕೀಂಗ್ ಮಾಡಿಕೊಂಡು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕಚೇರಿ ( 0820-2572333) ಅಥವಾ ಆ್ಯಪ್ ಸಹಾಯವಾಣಿ ಸಂಖ್ಯೆ: 6364024555, 6366745888 ಸಂಪರ್ಕಿಸಬಹುದು.