ಜಿಲ್ಲೆ

ಪ್ರಾಂಶುಪಾಲರ ಅಧ್ಯಕ್ಷರಾಗಿ ಮಂಜುನಾಥ ಭಟ್​ ಆಯ್ಕೆ

ಉಡುಪಿ ಜಿಲ್ಲಾ ಪ.ಪೂ. ಪ್ರಾಂಶುಪಾಲರ ಸಂಘದ ಮಹಾಸಭೆ

ಗೌರವಾಧ್ಯಕ್ಷರಾಗಿ ಡಿಡಿಪಿಯು ಮಾರುತಿ ಆಯ್ಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಜಿಲ್ಲಾ ಪದವಿಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಹಿರಿಯಡ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್​ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕೋಟದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ 21 ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಂಘದ ಗೌರವಾಧ್ಯಕ್ಷರಾಗಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕ ಮಾರುತಿ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಕಾರ್ಕಳದ ಭುವನೇಂದ್ರ ಪ.ಪೂ. ಕಾಲೇಜಿನ ರಮೇಶ ಎಸ್​.ಸಿ., ಖಜಾಂಚಿ- ಕಟಪಾಡಿ ತ್ರಿಶಾ ಕಾಲೇಜಿನ ಹರಿಪ್ರಸಾದ್​, ಸಾಂಸ್ಕೃತಿಕ ಕಾರ್ಯದರ್ಶಿ- ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಜಗದೀಶ ನಾವಡ, ಕ್ರೀಡಾ ಸಂಚಾಲಕ- ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂತೋಷ್​, ಪರೀಕ್ಷಾ ಸಂಚಾಲಕ- ಬ್ರಹ್ಮಾವರ ಸರ್ಕಾರಿ ಕಾಲೇಜಿನ (ಕೆಪಿಎಸ್) ರವೀಂದ್ರ ಉಪಾಧ್ಯ, ರಾಜ್ಯ ಸಂಘದ ಉಡುಪಿ ಜಿಲ್ಲಾ ಪ್ರತಿನಿಧಿ- ಕುಂದಾಪುರದ ಭಂಡಾರ್ಕರ್ಸ್​ ಕಾಲೇಜಿನ ಡಾ. ಜಿ.ಎಂ. ಗೊಂಡ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಮಲ್ಪೆಯ ಸರ್ಕಾರಿ ಕಾಲೇಜಿನ ವರ್ಗೀಸ್​ ಪಿ. ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕರಬ, ಜಗದೀಶಕುಮಾರ್​, ಸುಶೀಲಾ, ಜಗದೀಶ ಭಟ್​, ಸುಜಾತಾ ಎಂ., ಪ್ರಕಾಶ ಶೆಟ್ಟಿ, ಸೀತಾರಾಮ, ಗ್ರೆಟ್ಟಾ ಮೊರಾಸ್​, ಸುಚೇತಾ, ಮಾಲತಿದೇವಿ, ಕವಿತಾ, ಡಾ.ಜಾರ್ಜ್​, ಗೋಪಾಲಕೃಷ್ಣ ಮತ್ತು ರಿಚರ್ಡ್​ ಜೀವನ್​ ಮೊರಾಸ್​ ನೇಮಕಗೊಂಡರು.

ತಾಲೂಕು ನೋಡಲ್​ ಸೆಂಟರ್​ನ ಸದಸ್ಯರಾಗಿ ಲೀಲಾಬಾಯಿ ಭಟ್​, ಡಾ. ಸುಮಾ, ಅನ್ನಪೂರ್ಣಾ ಕಾಮತ, ರಾಮಕೃಷ್ಣ ಬಿ.ಜಿ. ಮತ್ತು ವೆಂಕಟರಮಣ ನಾಯಕ ಇವರನ್ನು ಆಯ್ಕೆ ಮಾಡಲಾಯಿತು.