ಜಿಲ್ಲೆ

ಬ್ರಹ್ಮಾವರದಲ್ಲಿ ಹತ್ತು ಸಾವಿರ ಗಿಡ ನೆಡುವ ಯೋಜನೆಗೆ‌ ಅರಣ್ಯ ಸಚಿವ‌ ಅರವಿಂದ ಲಿಂಬಾವಳಿ ಚಾಲನೆ

ಉಡುಪಿ: ಬ್ರಹ್ಮಾವರ- ಸೀತನಾದಿ‌( ಬ್ರಹ್ಮಾವರ ಹೆಬ್ರಿ ರಸ್ತೆ)‌ಏಳು ಕಿ.ಮೀ ರಸ್ತೆ ಅಗಲೀಕರಣ ವೇಳೆ ಒಂದು ಸಾವಿರ ಮರಗಳ ತೆರವುಗಳಿಸಿದ್ದು, ಈ ಪ್ರದೇಶದಲ್ಲಿ ಇದರ ಮೂರುಪಟ್ಟು ಹಣ್ಣು ಹಂಪಲುಗಳ ಗಿಡ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಸಚಿವ‌‌ ಅರವಿಂದ ಲಿಂಬಾವಳಿ ಭಾನುವಾರ‌ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಸಮೀಪ‌ ಜರಗಿದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು
ಅರಣ್ಯದೊಳಗೆ ಹಣ್ಣು ಹಂಪಲಿನ‌ ಮರಗಿಡಗಳಿಲ್ಲದೆ, ಪ್ರಾಣಿಗಳಿಗೆ ಆಹಾರ ದೊರಕುತ್ತಿಲ್ಲ ಇದರಿಂದ ‌ಪ್ರಾಣಿಗಳು ನಾಡಿಗೆ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶಾಸಕ ಕೆ.ರಘುಪತಿ ಭಟ್‌ ನೇತೃತ್ವದಲ್ಲಿ‌ ಅರಣ್ಯ ಇಲಾಖೆ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಬೆಳ್ತಂಗಡಿಯಲ್ಲಿ ವೀರೇಂದ್ರ ಹೆಗಡೆ ಅವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಅರಣ್ಯ ಇಲಾಖೆ ಜತೆಗೂಡಿ ಅರಣ್ಯದೊಳಗೆ ಹಣ್ಣುಹಂಪಲಿನ ಗಿಡಮರ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಅರಣ್ಯದೊಳಗಿನ 100‌ ಎಕ್ರೆ ಹಣ್ಣು ಹಂಪಲು ಗಿಡ ಬೆಳೆಸುವ ಬಗ್ಗೆ ಎಲ್ಲಾ ಶಾಸಕರು ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು. ತುಳುನಾಡಿನ‌ ಸಂಸ್ಕೃತಿ ಅರಣ್ಯ ಮತ್ತು ಮರಗಳ ಭಾಗವಾಗಿದೆ ಎಂದು ನುಡಿದರು. ‌ಶಾಸಕರಾದ ಕೆ.ರಘುಪತಿ ಭಟ್, ಸುನಿಲ್ ಕುಮಾರ್, ಅರಣ್ಯ ಇಲಾಖೆ ಡಿಎಫ್ ಒ ಆಶಿಶ್ ರೆಡ್ಡಿ ಮತ್ತಿತರರಿದ್ದರು.