ಜಿಲ್ಲೆ

ಬೆಳ್ಮಣ್ ಕ್ರಿಕೆಟ್‌ ಆಡುತ್ತಿದ್ದಾಗ ಕುಸಿದುಬಿದ್ದು ಯುವಕ‌ ಸಾವು

udupireporter

ಬೆಳ್ಮಣ್ : ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ನಂದಳಿಕೆ ಗ್ರಾಮದ ಮಾವಿನಕಟ್ಟೆ ಮೈದಾನದಲ್ಲಿ ಬುಧವಾರ ಸಂಜೆಯ ವೇಳೆ ನಡೆದಿದೆ.

ಹಾಳೆಕಟ್ಟೆ ನಿವಾಸಿ ಸುಕೇಶ್ ಶೆಟ್ಟಿ 27 ಮೃತಪಟ್ಟ ದುರ್ದೈವಿ. ಬೌಲಿಂಗ್ ಮಾಡುವ ವೇಳೆ ಕುಸಿದು ಬಿದ್ದ ಸುಕೇಶ್ ಹೃದಯಾಘಾತದಿಂದ ಸಾವನ್ನಪ್ಪಿದರೆ ಎಂದು ತಿಳಿದು ಬಂದಿದೆ. ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎನ್ನಲಾಗಿದೆ.