ಜಿಲ್ಲೆ

ಉಡುಪಿಯಲ್ಲಿ ದಾಂಡಿಯಾ ಕಲರವ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಡುಪಿ ಆಶ್ರಯದಲ್ಲಿ ಕಾತ್ಯಾಯಿನಿ ಮಂಟಪ ಕಡಿಯಾಳಿ ಉಡುಪಿ ಇದರ ನವರಾತ್ರಿ ಪ್ರಯುಕ್ತ 6ನೇ ವರ್ಷದ ಉಡುಪಿ&ದ.ಕ ಜಿಲ್ಲೆಯ ಅತಿದೊಡ್ಡ ದಾಂಡಿಯಾ ನೃತ್ಯ ಕಾರ್ಯಕ್ರಮ ಎಂಜಿಎಂ ಮೈದಾನದಲ್ಲಿ ಶನಿವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.
ಸಾವಿರಾರು ಮಹಿಳೆಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ಉಡುಪಿ ದಾಂಡಿಯಾ ಕಾರ್ಯಕ್ರಮದ ರಂಗು ಹೆಚ್ಚಿಸಿದರು.

ಮಹಿಳೆಯರು, ಯುವಕ-ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಕೋಲಾಟ ನಡೆಸುತ್ತ, ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕಿ ಉತ್ಸವದ ಕಿಚ್ಚು ಹೆಚ್ಚಿಸಿದರು. ಸಾವಿರಾರು ಜನರು ದಾಂಡಿಯಾ ನೃತ್ಯ ವೀಸಿದರು. ಆಭರಣ ಜ್ಯುವೆಲ್ಲರ್ಸ್​ನ ಸಂಧ್ಯಾ ಎಸ್​. ಕಾಮತ್​ ಹಾಗೂ ಜಯಲಕ್ಷಿ ಸಿಲ್ಕ್​ ಮಾಲೀಕ ಅಪರ್ಣಾ ಆರ್​. ಹೆಗಡೆ, ಜಯಲಕ್ಷಿ ವಿ. ಹೆಗಡೆ ಉಡುಪಿ ದಾಂಡಿಯಾಕ್ಕೆ ಚಾಲನೆ ನೀಡಿದರು.

ಆಭರಣ ಜುವೆಲ್ಲರ್ಸ್​ ಪ್ರಾಯೋಜಕತ್ವದಲ್ಲಿ ಈ ಬಾರಿ 6ನೇ ವರ್ಷದ ಉಡುಪಿ ದಾಂಡಿಯಾ ಆಯೋಜಿಸಿದ್ದೇವೆ. ಇದು ಗುಜರಾತ್​ ಮೂಲದ ಕಲೆಯಾದರೂ ನಮ್ಮ ನಾಡಿನ ಮಹಿಳೆಯರೂ ನವರಾತ್ರಿ ಸಂದರ್ಭದಲ್ಲಿ ಖುಷಿಯಿಂದ ನೃತ್ಯ ಮಾಡಿ ದೇವಿಯ ಆರಾಧನೆ ಮಾಡುವಂತಾಗಬೇಕು ಎಂದು ಆಯೋಜಿಸಿದ್ದೇವೆ. 10 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಹಿರಿಯರಿಗೆ ಸ್ಪರ್ಧೆ ಆಯೋಜಿಸಿದ್ದೇವೆ. ಉಡುಪು, ನೃತ್ಯ, ಗ್ರೂಪ್​ ಡ್ಯಾನ್ಸ್​ ಎಂಬ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.