ಜಿಲ್ಲೆ

6 ಸಾವಿರ ಗಡಿ ದಾಟಿದ ಸೋಂಕಿತರು, ಮೃತಪಟ್ಟ 14 ವರ್ಷದ ಬಾಲಕನಿಗೆ ಸೋಂಕು

Udupi

ಉಡುಪಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಆರು ಸಾವಿರ ಗಡಿ ದಾಟಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6194ಕ್ಕೆ ಏರಿಕೆಯಾಗಿದೆ. ಭಾನುವಾರ 282 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಉಡುಪಿ 152, ಕುಂದಾಪುರ 86, ಕಾರ್ಕಳದ 43 ಮಂದಿ, ಹೊರ ಜಿಲ್ಲೆಯ ಒಬ್ಬರು ಸೋಂಕಿತರು.

ವಿವಿಧ ಆರೋಗ್ಯ ಸಮಸ್ಯೆ ಹೊಂದಿದ್ದ 14 ವರ್ಷದ ಕುಂದಾಪುರ ತಾಲೂಕಿನ ಬಾಲಕ ಮೃತಪಟ್ಟಿದ್ದಾನೆ. ಚರ್ಮ ರೋಗ ಮತ್ತು ಬ್ಲಡ್ ಇನ್ಪೆಕ್ಷನ್ ಜತೆಗೆ ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ 7ರಂದು ಆಸ್ಪತ್ರೆಗೆ ದಾಖಲಾಗಿದ್ದ.

ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಹೋಂ ಮತ್ತು ಆಸ್ಪತ್ರೆ ಐಸೋಲೇಶನ್‌ನಿಂದ 97 ಮಂದಿ ಗುಣವಾಗಿ ಮನೆ ಸೇರಿದ್ದಾರೆ. ಇದುವರೆಗೆ 3444 ಮಂದಿ ಸೋಂಕಿನಿಂದ ಸಂಪೂರ್ಣ ಮುಕ್ತರಾಗಿದ್ದಾರೆ.

ಕೋವಿಡ್-19 ರ‌್ಯಾಂಡಮ್ ಪರೀಕ್ಷೆ ವ್ಯವಸ್ಥೆ ಚುರುಕುಗೊಂಡಿದ್ದು ಶುಕ್ರವಾರ 1383 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 1343 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 1298 ಮಂದಿಯ ವರದಿ ಬರಲು ಬಾಕಿ ಇದೆ. 2697 ಸಕ್ರಿಯ ಪ್ರಕರಣಗಳಿವೆ. - ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ