ಜಿಲ್ಲೆ

ಉಡುಪಿ ನಗರಸಭೆಗೆ ಕೇಂದ್ರ ಸರ್ಕಾರದಿಂದ 47.50 ಕೋಟಿ ಅನುದಾನ: ಯಶ್ ಪಾಲ್ ಸುವರ್ಣ

ಉಡುಪಿ:  ನಗರಸಭೆ ವ್ಯಾಪ್ತಿಯ ದ್ರವ ಹಾಗೂ ಘನ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ 47.50 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯ ದ್ರವ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಎನ್ ಜಿ ಟಿ ಮೂಲಕ ರೂ. 30 ಕೋಟಿ ಹಾಗೂ ಘನ ತ್ಯಾಜ್ಯ ವೈಜ್ಞಾನಿಕವಾಗಿ ನಿರ್ವಹಿಸಲು ರೂ. 13 ಕೋಟಿಗಳ ಪ್ರಸ್ತಾವನೆಗೆ ಅನುಮತಿ ನೀಡಿದೆ ಹಾಗೂ ಘನ ತ್ಯಾಜ್ಯ ನಿರ್ವಹಣಾ ಎಂ.ಆರ್‌.ಎಫ್. ಘಟಕ ಸ್ಥಾಪನೆಗೆ ರೂ. 4.5 ಕೋಟಿ ರೂಪಾಯಿ ಮಂಜೂರುಗೊಳಿಸುವ ಮೂಲಕ ನಗರದ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.