ಜಿಲ್ಲೆ

ಉಡುಪಿ ನಗರಸಭಾ ಸದಸ್ಯೆ ನಿಧನ

ಉಡುಪಿ : ನಗರಸಭಾ ಪೆರಂಪ್ಪಳ್ಳಿ ವಾರ್ಡನ  ಸದಸ್ಯೆ, ಕಾಂಗ್ರೆಸ್ ನಾಯಕಿ ಸೆಲೀನಾ ಕರ್ಕಡ (52) ಅನಾರೋಗ್ಯದಿಂದ ಶನಿವಾರ ತಡರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕರುಳಿನ ಕ್ಯಾನ್ಸರ್ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಮೃತರು ಪತಿ, ಪುತ್ರ ಹಾಗೂ ಸಹೋದರನನ್ನು ಅಗಲಿದ್ದಾರೆ.