ಜಿಲ್ಲೆ

ಉಡುಪಿ ಬಿಆರ್ಎಸ್ ಆಸ್ಪತ್ರೆ 16 ಸಿಬ್ಬಂದಿಯನ್ನು ವಜಾಗೊಳಿಸಿದ ಆಡಳಿತ ಮಂಡಳಿ !

udupireporter

ಉಡುಪಿ: ನಗರದ ಬಿಆರ್ ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಕೋವಿಡ್ ಕಾರಣ ನೀಡಿ ಏಕಾಏಕಿ 16 ಮಂದಿ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ‌ ಎಂದು ಆರೋಪಿಸಿ ಆಸ್ಪತ್ರೆ ಉಳಿದ ಸಿಬ್ಬಂದಿ ಬುಧವಾರ ಮತ್ತೆ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಲ್ಯಾಬ್ ಟೆಕ್ನೀಶಿಯನ್ಸ್, ಸ್ವಚ್ಚತಾ ಸಿಬ್ಬಂದಿ, ಪ್ಯಾರಮೆಡಿಕಲ್ ಸಿಬ್ಬಂದಿ, ಸುರಕ್ಷತಾ ಸಿಬ್ಬಂದಿ ಇದರಲ್ಲಿ ಸೇರಿದ್ದಾರೆ.‌ ಇದರಿಂದ ಆಸ್ಪತ್ರೆ ಉಳಿದಿ ಸಿಬ್ಬಂದಿ ವರ್ಗ ಬುಧವಾರ ಬೆಳಗ್ಗೆಯಿಂದ ಪ್ರತಿಭಟನೆ ಕುಳಿತುಕೊಂಡಿದ್ದರು. ಇತ್ತೀಚೆಗೆ ಬಾಕಿ ವೇತನ ಪಾವತಿ ಸಂಬಂಧಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒಂದು ವಾರದ ಒಳಗೆ ಆಡಳಿತ ಮಂಡಳಿ ಕಡೆಯಿಂದ ವೇತನ ಪಾವತಿಸುವ ಭರವಸೆ ನೀಡಿತ್ತು.ಅದರ ನಡುವೆ ಯಾವುದೇ ಮಾಹಿತಿ ಮುನ್ಸೂಚನೆ ನೀಡದೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.‌ ಇದು ಖಂಡನೀಯವಾಗಿದ್ದು, ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.‌ ರೋಗಿಗಳಿಗೆ ಯಾವುದೆ ಸಮಸ್ಯೆಯಾಗದಂತೆ ಆಸ್ಪತ್ರೆ ಕಾರ್ಯ ನಿರ್ವಹಣೆ ಎಂದಿನಂತೆ ನಡೆಯುತ್ತಿದೆ ಎಂದು ಸಿಬ್ಬಂದಿ ವರ್ಗ‌ ತಿಳಿಸಿದೆ.

ಕಾಸ್ಟ್ ಕಟ್ಟಿಂಗ್ ನೆಲೆಯಿಂದ 16 ಮಂದಿ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆನಂತರ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಆಡಳಿತ ಮಂಡಳಿ ಪೂರಕವಾಗಿ ಸಹಕರಿಸಲಿದೆ. ಸಿಬ್ಬಂದಿ ವಜಾ ಮಾಡಲು ಬೇರಾವುದೇ ಉದ್ದೇಶ‌ ಹೊಂದಿಲ್ಲ. ಇದು ಜನರ ಸೇವೆಗಾಗಿ ಇರುವ ಆಸ್ಪತ್ರೆಯಾಗಿದೆ.‌ ಪದೇ ಪದೇ ಪ್ರತಿಭಟನೆ, ಮುಷ್ಕರದಲ್ಲಿ ಸಿಬ್ಬಂದಿ ಪಾಲ್ಗೋಂಡು ಆಸ್ಪತ್ರೆ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದಂತಾಗುತ್ತದೆ. ಮುಂದೆ ಆಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು
ಆಡಳಿತ ಮಂಡಳಿ ಮುಖ್ಯಸ್ಥರಾದ ಕುಶಾಲ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.