ಉಡುಪಿ: ಭಾರತೀಯ ಮೂಲದ ವ್ಯಕ್ತಿಗಳು ಅಮೇರಿಕಾದಲ್ಲಿ ಅನೇಕ ಕಂಪೆನಿಗಳನ್ನು ಮುನ್ನಡೆಸುತ್ತಿದ್ದು, ಮೈಕ್ರೋಸಾಫ್ಟ್, ಆಲ್ಟಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ನಂತರ ಇದೀಗ ಕಂಟೆಂಟ್ಫುಲ್ ಕಂಪೆನಿಯಲ್ಲಿ ಉಡುಪಿ ಮೂಲದ ಕಾರ್ತಿಕ್ ರಾವ್ ಉನ್ನತ ಹುದ್ದೆಗೆ ಏರಿದ್ದಾರೆ.
ಮೂಡು ಅಲೆವೂರು ಮೂಲದ ಅಮೆರಿಕ ಕ್ಯಾಲಿಪೋರ್ನಿಯಾ ನಿವಾಸಿ ದಿ.ಡಾ.ಸುಬ್ರಹ್ಮಣ್ಯ ರಾವ್ ಪುತ್ರ ಕಾರ್ತಿಕ್ ರಾವ್ (46) ಏ.11ರಂದು ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಹುಟ್ಟಿ ಬೆಳೆದಿರುವ ಕಾರ್ತಿಕ ಸ್ಟ್ಯಾನ್ಫರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಷಯದಲ್ಲಿ ಎಂಎಸ್ ಪದವಿ ಪೂರೈಸಿದ್ದಾರೆ. 20 ವರ್ಷಗಳಿಂದ ವಿವಿಧ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಸಿಗ್ನಲ್ ಎಫ್ಎಕ್ಸ್ ಎಂಬ ಕೌಡ್ ಮಾನಿಟರಿಂಗ್ ಕಂಪೆನಿಯನ್ನು ಹುಟ್ಟುಹಾಕಿದ್ದರು. ಕಂಪನಿಯನ್ನು ಇತ್ತೀಚೆಗೆ ಸ್ಪಂಕ್ ಕಂಪನಿ 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧಿನಪಡಿಸಿಕೊಂಡಿದೆ. ವಿಎಂವೇರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜ್ ಮೆಂಟ್ ಮತ್ತು ವರ್ಲ್ಡ್ ವೈಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಕಂಟೆಂಟ್ಫುಲ್ (ಡೆನ್ವರ್ ಆ್ಯಂಡ್ ಸಾನ್ ಫ್ರಾನ್ಸಿಸ್ಕೊ ಆ್ಯಂಡ್ ಬರ್ಲಿನ್) ಕಂಪನಿ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್ ಅವರನ್ನು ನೇಮಕ ಮಾಡಿದೆ.
ಕೌಟುಂಬಿಕ ಹಿನ್ನೆಲೆ
ಕಾರ್ತಿಕ್ ಅವರ ಅಜ್ಜ ದಿ.ಜಿ.ಲಕ್ಷ್ಮೀನಾರಾಯಣ್, ಇಂಡಿಯನ್ ಬ್ಯಾಂಕ್ ಚೇರ್ಮೆನ್ ಮತ್ತು ಎಂಡಿಯಾಗಿದ್ದು, ಚೆನ್ನೆ$ನಲ್ಲಿ ವಾಸ್ತವ್ಯದಲ್ಲಿದ್ದರು. ತಂದೆ ದಿ. ಡಾ. ಎಲ್.ಸುಬ್ರಹ್ಮಣ್ಯ ರಾವ್ ಚೆನ್ನೈನ ಸ್ಪ್ಯಾನಿ ಮೆಡಿಕಲ್ ಕಾಲೇಜಿನಿಂದ ವೈದ್ಯಕಿಯ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಅಮೇರಿಕಾದ ಕ್ಯಾಲಿೋರ್ನಿಯಾ ರಾಜ್ಯದ ಆ್ಯನೆಹ್ಯಾಮ್ನಲ್ಲಿ ಕ್ಯಾನ್ಸರ್ ತಜ್ಞರಾಗಿದ್ದರು. ತಾಯಿ ರಜಿ ರಾವ್. ದಂಪತಿಗೆ ಇಬ್ಬರು ಮಕ್ಕಳು ಕಾರ್ತಿಕ್ ಮತ್ತು ಅಶೋಕ್.