ಜಿಲ್ಲೆ

ಉಡುಪಿಯಲ್ಲಿ 50 ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Udupi

ಉಡುಪಿ: ಜಿಲ್ಲೆಯಲ್ಲಿ 50 ಮಂದಿ ದಲಿತ ಸಮುದಾಯದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಬೌದ್ಧ ಮಹಾಸಭಾ ವತಿಯಿಂದ ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ 64ನೇ ದಮ್ಮ ಚಕ್ರ ಪ್ರವರ್ತನಾ ದಿನಾಚರಣೆಯಲ್ಲಿ ಜಿಲ್ಲೆಯ 50 ಮಂದಿ ದಲಿತರು ಬೌದ್ಧಧರ್ಮಕ್ಕೆ ಮತಾಂತರಗೊಂಡರು.

ಮೈಸೂರು ಕೊಳ್ಳೇಗಾಲ ಜೀವನ ಬುದ್ಧ ವಿಹಾರದಿಂದ ಆಗಮಿಸಿದ ಬೌದ್ಧಧರ್ಮ ಗುರು ಸುಗತಪಾಲ ಭಂತೇಜಿ ಪ್ರಮಾಣವಚನ ಬೋಧಿಸಿದರು.

ದಲಿತ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಅಣ್ಣಪ್ಪನಕ್ರೆ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ವಿ., ಕೀರ್ತಿಕುಮಾರ್ ಪಡುಬಿದ್ರಿ, ಶೇಖರ್ ಹೆಜಮಾಡಿ, ಶೇಖರ ಹಾವಂಜೆ, ಶಂಭು ಮಾಸ್ಟರ್, ಪುಷ್ಪಾಕರ್, ಮಂಜುನಾಥ ಗಿಳಿಯಾರು ಉಪಸ್ಥಿತರಿದ್ದರು.