ಬೆಂಗಳೂರು: ಯಾವುದೇ ವ್ಯಕ್ತಿ ಶೇ.40ಕ್ಕಿಂತ ಕಡಿಮೆ ಅಂಗವೈಕಲ್ಯತೆ ಹೊಂದಿದ್ದರೂ, ಅವರಿಗೂ ಅಂಗವೈಕಲ್ಯ ಪ್ರಮಾಣಪತ್ರ ವಿತರಣೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಕುರಿತು ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದು, ಈ ಹಿಂದಿನ ಆದೇಶದಂತೆ ಎಲ್ಲ ಸಮರ್ಥ ಅಧಿಸೂಚಿತ ವೈದ್ಯಕೀಯ ಅಧಿಕಾರಿಗಳು ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಹಾಗೂ ಯುಡಿಐಡಿ ಕಾರ್ಡ್‌ಗಳನ್ನು ಯುಡಿಐಡಿ ಪೋರ್ಟಲ್ https://www.swavalambancard.gov.in/ ಮುಖಾಂತರವೇ ನೀಡಬೇಕೆಂದು ಎಂದು ತಿಳಿಸಿದ್ದಾರೆ.
2016ರ ಆರ್‌ಪಿಡಬ್ಲುೃಡಿ ಕಾಯ್ದೆ ಪ್ರಕಾರ ಯುಡಿಐಡಿ ಕಾರ್ಡ್ ನೀಡಲು ಶೇ.40ಕ್ಕಿಂತ ಕಡಿಮೆ ಅಂಗವೈಕಲ್ಯ ಇರಬಾರದು ಎಂಬ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಹಾಗಾಗಿ ಶೇ.40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೂ ನಿರಾಕರಣೆ ಮಾಡದೆ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಹಾಗೂ ಯುಡಿಐಡಿ ಕಾರ್ಡ್‌ಗಳನ್ನು ನೀಡುವಂತೆ ಎಲ್ಲ ವೈದ್ಯಕೀಯ ಪ್ರಾಧಿಕಾರಗಳ ಅಸ್ಪತ್ರೆಗಳಿಗೆ ನಿರ್ದೇಶಿಸಿದ್ದಾರೆ.