ರಾಯಚೂರು ದೇವತೆಗಳ ಪರಂಪರೆಯ ನೋಡಿದಾಗ ಪುರುಷ ಪ್ರಧಾನದಲ್ಲಿ ಮಹಿಳೆ ದೇವತೆಗಳು ಕಾಣಬಹುದಾಗಿದೆ. ಸಾಕಷ್ಟು ಪುರುಷ ದೇವಾಲಯಗಳಲ್ಲಿ ಹೆಣ್ಣು ದೇವತೆಗಳನ್ನು ಕಾಣುತ್ತೇವೆ. ಇದಕ್ಕೆ ಭಿನ್ನವಾಗಿ ರೇಣುಕ ಎಲ್ಲಮ್ಮ ಇಲ್ಲಿಯ ಆಚರಣೆಗಳು ಸಂಪ್ರದಾಯಗಳು ಕಾಣಬಹುದೆಂದು ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನೆ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾ ಸಂಕುಲ ಸಂಸ್ಥೆ ವತಿಯಿಂದ ಲೇಖಕಿ ರೇಖಾ ಬಡಿಗೇರ್ ಅವರ ಉಧೋ ಉದೋ ರೇಣುಕಾ ಎಲ್ಲಮ್ಮನ ಜೀವನ ಚರಿತ್ರೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು, ಸಾಹಿತ್ಯದ ಕಿಚ್ಚನ್ನು ಜನರಿಗೆ ತಲುಪಿಸುವ ಉತ್ಸಾಹ ಬಂದಾಗ ಮಾತ್ರ ಇತಿಹಾಸ, ಚರಿತ್ರೆ, ಜಾನಪದ ಸಾಹಿತ್ಯ ಬೆಳಕಿಗೆ ತರಲು ಸಾಧ್ಯ. ಈ ಹಿನ್ನೆಲೆಯಲ್ಲಿ ದೇವರಿಗೆ ಜೀವನ ಚರಿತ್ರೆ ಇರೋದಿಲ್ಲ, ಆದರೆ ರೇಣುಕಾ ಯಲಮ್ಮಳ ಜೀವನ ಚರಿತ್ರೆಯ ಕೃತಿ ರಚನೆ ಮಾಡಿದ್ದಾರೆ. ಇದರಲ್ಲಿ ಹಲವು ವಿಷಯಗಳ ಕಲೆಹಾಕಿ ಭಕ್ತಿ ಪೂರಕವಾಗಿ ಕೃತಿ ರಚನೆ ಮಾಡಿದ್ದಾರೆ ಎಂದರು.
ಜಗತ್ತಿನ ಇತಿಹಾಸದಲ್ಲಿ ಅದರಲ್ಲೂ ದೇವರುಗಳ ಕಂಡು ಬರುವುದು ಭಾರತ ದೇಶದ ಇತಿಹಾಸದ ಪುಟಗಳಲ್ಲಿ ಅನೇಕ ದೇವಾನು ದೇವತೆಯರು ಕಾಣಬಹುದಾಗಿದೆ. ಧಾರ್ಮಿಕ ಭಕ್ತಿ, ಸಾಮಾಜಿಕ ಆಯಾಮದಲ್ಲಿ ಕೃತಿ ರಚನೆ ಮಾಡಿದ್ದಾರೆ.
ರೇಣುಕಾ ಎಲ್ಲಮ್ಮನ ಬಗ್ಗೆ ಸಾಕಷ್ಟು ಪುಸ್ತಕಗಳು ಹೊರ ಬಂದಿವೆ, ಎಲ್ಲಮ್ಮರ ಸಂಪ್ರದಾಯದಗಳು ಮತ್ತು ಆಚರಣೆಗಳು, ಎಲ್ಲಮ್ಮನ ಸಂಪ್ರದಾಯ, ಜಮದಗ್ನಿ ಕತೆ, ಇವುಗಳಿಗಿಂತ ಇನ್ನು ಭಿನ್ನವಾಗಿ ಎಲ್ಲಮ್ಮಳ ಕುರಿತು ಕೃತಿ ರಚನೆ ಮಾಡಬಹುದಿತ್ತು, ದೇವತೆಗಳ ಪರಂಪರೆಯ ನೋಡಿದಾಗ ಪುರುಷ ಪ್ರಧಾನದಲ್ಲಿ ಮಹಿಳೆ ದೇವತೆಗಳು ಕಾಣಬಹುದಾಗಿದೆ. ಸಾಕಷ್ಟು ಪುರುಷ ದೇವಾಲಯಗಳಲ್ಲಿ ಹೆಣ್ಣು ದೇವತೆಗಳನ್ನು ಕಾಣುತ್ತೇವೆ. ಇದಕ್ಕೆ ಭಿನ್ನವಾಗಿ ರೇಣುಕ ಎಲ್ಲಮ್ಮ ಇಲ್ಲಿಯ ಆಚರಣೆಗಳು ಸಂಪ್ರದಾಯಗಳು ಕಾಣಬಹುದು ಎಂದರು.
ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿಯ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ. ಶರಣಪ್ಪ ಚಲುವಾದಿ ಕೃತಿ ಪರಿಚಯಿಸಿ ಮಾತನಾಡಿ, ರೇಣುಕಾ ಎಲ್ಲಮ್ಮರ ಬಗ್ಗೆ ಈಗಾಗಲೇ ಅನೇಕರು ಸಾಕಷ್ಟು ಕೃತಿಗಳು ರಚನೆ ಮಾಡಿದ್ದಾರೆ, ರೇಖಾ ಬಡಿಗೇರ್ ಅವರ ರಚನೆ ಉಧೋ ಉಧೋ ರೇಣುಕಾ ಎಲ್ಲಮ್ಮ ಜೀವನ ಚರಿತ್ರೆ ಕೃತಿಯನ್ನು ರಚನೆ ಮಾಡಿದ್ದು ಇದಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ ಅವರು ಮುನ್ನುಡಿ ಬರೆದಿದ್ದಾರೆ. ಮತ್ತು ಅಲ್ಲಿನ ದೇವಸ್ಥಾನ ಅರ್ಚಕರ ಮಾತುಗಳನ್ನು ಇಲ್ಲಿ ಸೇರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕಸಾಪ ತಾಲೂಕ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಹಿರಿಯ ಸಾಹಿತಿ ವೀರ ಹನುಮಾನ, ಮಹರ್ಷಿ ವಾಲ್ಮೀಕಿ ವಿವಿ ಸಿಂಡಿಕೇಟ್ ಸದಸ್ಯ ಚನ್ನಬಸವ , ಜಿ.ಎನ್. ಹೊರಪೇಟೆ, ಕೃತಿ ಕತೃ ರೇಖಾ ಬಡಿಗೇರ್ ಸೇರಿದಂತೆ ಅನೇಕರು ಇದ್ದರು.