ಜಿಲ್ಲೆ

ಭಕ್ತಿಸುಧೆ ಹರಿಸಿದ ಉಧೋ ಉಧೋ ಎಲ್ಲವ್ವ, ಹುಬ್ಬಳ್ಳಿಯಲ್ಲಿ ಜನಪದ ಹಾಡುಗಳ ಹಬ್ಬ

ಹುಬ್ಬಳ್ಳಿ: ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಪ್ರೇಮ್ ಜಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಉಧೋ ಉಧೊ ಯಲ್ಲವ್ವ ಜನಪದ ಹಾಡುಗಳ ಹಬ್ಬ ಭಕ್ತಿ ಸುಧೆ ಹರಿಸಿತು.

ಖ್ಯಾತ ಕಲಾವಿದೆ ಸವಿತಕ್ಕ ಅವರು ದೇವಿ ಯಲ್ಲಮ್ಮನ ಕುರಿತು ವಿವಿಧ ಹಾಡು ಪ್ರಸ್ತುತ ಪಡಿಸಿದರು.

ಪದ್ಮಶ್ರೀ ಪುರಸ್ಕೃತ ಡಾ. ಮಾತಾ ಮಂಜಮ್ಮ ಜೋಗತಿ ಅವರ ಉಪಸ್ಥಿತಿಯಲ್ಲಿ ಅವರ ಜೀವನಾಧಾರಿತ ಮಾತಾ ಏಕವ್ಯಕ್ತಿ ರಂಗ ಪ್ರಯೋಗ ಏರ್ಪಡಿಸಲಾಗಿತ್ತು.

ಆಷಾಡ ಶುಕ್ರವಾರದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.